ಅಜೆಕಾರು : ಸಂಬಳ ವಿಚಾರದಲ್ಲಿ ಜಗಳ, ಕೆಲಸದವನಿಗೆ ಕತ್ತಿಯಿಂದ ತಿವಿದ ಮಾಲಿಕ

Spread the love

ಅಜೆಕಾರು : ಸಂಬಳ ವಿಚಾರದಲ್ಲಿ ಜಗಳ, ಕೆಲಸದವನಿಗೆ ಕತ್ತಿಯಿಂದ ತಿವಿದ ಮಾಲಿಕ

ಕಾರ್ಕಳ: ಸಂಬಳದ ವಿಚಾರದಲ್ಲಿ ಕೆಲಸದವನಿಗೆ ತನ್ನ ಮಾಲಿಕ ಕತ್ತಿಯಿಂದ ತಿವಿದು ಗಾಯಗೊಳಿಸಿದ ಘಟನೆ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಕೇರಳ ನಿವಾಸಿ ಶ್ಯಾಮ (32) ಎಂಬವರು ಎಳ್ಳಾರೆ ಗ್ರಾಮದ ಮಾವಿನಕಟ್ಟೆ ನೀರಿನ ಟ್ಯಾಂಕಿಯ ಬಳಿಯಲ್ಲಿರುವ ಶಿಜೋ ಎಂಬವರ ರಬ್ಬರ್ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದು, ಶನಿವಾರ ರಬ್ಬರ್ ತೋಟದ ಮಾಲೀಕ ಶಿಜೋ ರವರ ಬಳಿ ಸಂಬಳದ ವಿಚಾರದಲ್ಲಿ ಮಾತುಕತೆ ನಡೆಸುತ್ತಿರುವಾಗ ಮಾತಿಗೆ ಮಾತು ಬೆಳೆದು ಶಿಜೋರವರು ತನ್ನ ಕೈಯಲ್ಲಿದ್ದ ರಬ್ಬರ್ ಟ್ಯಾಪಿಂಗ್ ಮಾಡುವ ಕತ್ತಿಯಿಂದ ಶ್ಯಾಮ ಅವರಗೆ ತಿವಿದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಗಾಯಗೊಂಡ ಶ್ಯಾಮರವರು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.


Spread the love