ಅಜ್ಜನ ಕೈಹಿಡಿದು ಹೆದ್ದಾರಿ ದಾಟಿ ತಿಂಡಿಗೆ ಹೋಗಿದ್ದ ಮಗು ; ಹಿಂತಿರುಗಿ ಬರುತ್ತಿದ್ದಾಗ ಕಾರು ಡಿಕ್ಕಿಯಾಗಿ ಸಾವು
ಮಂಗಳೂರು: ಅಜ್ಜನ ಜೊತೆಗೆ ಕೈ ಹಿಡಿದು ತಿಂಡಿಗೆ ತೆರಳಿದ್ದ ಮಗು ಹೆದ್ದಾರಿಯಲ್ಲಿ ಕೈ ಬಿಟ್ಟು ಹಿಂದಕ್ಕೆ ತೆರಳಿದ ವೇಳೆ ಕಾರು ಡಿಕ್ಕಿಯಾಗಿ ಮೂರು ವರ್ಷದ ಮಗು ದಾರುಣ ಮೃತಪಟ್ಟ ಘಟನೆ ಚಾರ್ಮಾಡಿ ಹೆದ್ದಾರಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಬೀಟಿಗೆ ಎಂಬಲ್ಲಿ ಘಟನೆ ನಡೆದಿದೆ.
ಬೆಳ್ತಂಗಡಿ, ಡಿ.4 : ಅಜ್ಜನ ಜೊತೆಗೆ ಕೈ ಹಿಡಿದು ತಿಂಡಿಗೆ ತೆರಳಿದ್ದ ಮಗು ಹೆದ್ದಾರಿಯಲ್ಲಿ ಕೈ ಬಿಟ್ಟು ಹಿಂದಕ್ಕೆ ತೆರಳಿದ ವೇಳೆ ಕಾರು ಡಿಕ್ಕಿಯಾಗಿ ಮೂರು ವರ್ಷದ ಮಗು ದಾರುಣ ಮೃತಪಟ್ಟ ಘಟನೆ ಚಾರ್ಮಾಡಿ ಹೆದ್ದಾರಿಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಬೀಟಿಗೆ ಎಂಬಲ್ಲಿ ಘಟನೆ ನಡೆದಿದೆ.
ಚಾರ್ಮಾಡಿ ಗ್ರಾಮ ಪಂಚಾಯತ್ ಸದಸ್ಯ ಬೀಟಿಗೆ ನಿವಾಸಿ ಸಿದ್ದಿಕ್ ಯು.ಪಿ ಅವರ ಮೂರು ವರ್ಷದ ಮಗು ಮುಹಮ್ಮದ್ ಹಝೀರಿನ್ ಮೃತ ದುರ್ದೈವಿ.
ತುಂಟಾಟದ ಮಗು ಅಜ್ಜನ ಜೊತೆಗೆ ಕೈಹಿಡಿದು ತನ್ನ ಮನೆ ಬಳಿಯ ಅಂಗಡಿಗೆ ತಿಂಡಿ ತರಲು ಹೋಗಿದ್ದು ಹಿಂದಿರುಗಿ ರಸ್ತೆ ದಾಟುತ್ತಿದ್ದಾಗ ಕೈಬಿಟ್ಟು ಓಡಿದ್ದು ವೇಗವಾಗಿ ಚಾರ್ಮಾಡಿ ಕಡೆಯಿಂದ ಬೆಳ್ತಂಗಡಿಗೆ ತೆರಳುತ್ತಿದ್ದ ಕಾರು ಮಗುವಿಗೆ ಢಿಕ್ಕಿ ಹೊಡೆದಿದೆ. ದೂರಕ್ಕೆ ಎಸೆಯಲ್ಪಟ್ಟ ಮಗುವನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮಂಗಳೂರಿನ ಆಸ್ಪತ್ರೆಗೆ ಒಯ್ಯುವಷ್ಟರಲ್ಲಿ ಮೃತಪಟ್ಟಿದೆ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿದ್ದು ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
