ಅಟೋ ರಿಕ್ಷಾ ಮತ್ತು ಬೈಕ್ ನಡುವೆ ಅಫಘಾತದಲ್ಲಿ – ವಿದ್ಯಾರ್ಥಿ ಮೃತ್ಯು

Spread the love

ಅಟೋ ರಿಕ್ಷಾ ಮತ್ತು ಬೈಕ್ ನಡುವೆ ಅಫಘಾತದಲ್ಲಿ – ವಿದ್ಯಾರ್ಥಿ ಮೃತ್ಯು

ಬೆಳ್ತಂಗಡಿ: ಅಟೋ ರಿಕ್ಷಾ ಮತ್ತು ಬೈಕ್ ನಡುವೆ ನಡೆದ ಅಫಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಸಂಭವಿಸಿದೆ.

ಮೃತ ವಿದ್ಯಾರ್ಥಿಯನ್ನು ಪಾರಂಕಿ ಗ್ರಾಮದ ನಿವಾಸಿ ವಸಂತ ನಾಯಕ್ ಅವರ ಪುತ್ರ ಶಿವಪ್ರಸಾದ್ (19) ಎಂದು ಗುರುತಿಸಲಾಗಿದೆ. ಶಿವಪ್ರಸಾದ್ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಥಮ ಬಿ ಎ ವಿದ್ಯಾರ್ಥಿಯಾಗಿದ್ದ.

ಮಾಹಿತಿಗಳ ಪ್ರಕಾರ ಬುಧವಾರ ಶಿವಪ್ರಸಾದ್ ಅವರ ಬೈಕ್ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ವೇಳೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Leave a Reply

Please enter your comment!
Please enter your name here