ಅಡಚಣೆಗಳನ್ನು ಮೆಟ್ಟಿ ನಿಂತು ಜೀವನದಲ್ಲಿ ಯಶಸ್ಸು ಹೊಂದಬೇಕು – ಗೌತಮ್ ನಾವಡ
ಮೂಡಬಿದಿರೆ: ನಾವು ಜೀವನದಲ್ಲಿ ಏನಾದರೂ ಸಾಧನೆ ಮಾಡುವಾಗ ಅಡೆತಡೆಗಳು ಸಹಜ. ಅಂತಹ ಅಡಚಣೆಗಳನ್ನು ಮೆಟ್ಟಿನಿಂತು ಜೀವನದಲ್ಲಿ ಯಶಸ್ಸನ್ನು ಹೊಂದಬೇಕು ಫೋರ್ತ್ ಫೋಕಸ್ ಸಂಸ್ಥೆಯ ಸಂಸ್ಥಾಪಕ ಹಾಗೂ ನಿರ್ದೇಶಕ ವಿ ಗೌತಮ್ ನಾವಡ ತಿಳಿಸಿದರು.
ನಮ್ಮ ಬಗ್ಗೆ ಅತಿಯಾದ ಅಹಃ ಇರಬಾರದು. ಆದರೆ ಆತ್ಮಗೌರವನ್ನು ಬೆಳೆಸಿಕೊಂಡಿರಬೇಕು. ತಾಳ್ಮೆ, ಸಂಯಮ ನಮ್ಮ ಬಾಳಿಗೆ ಸದಾ ಸಹಕಾರಿ. ಇದೇ ಸಂಧರ್ಭದಲ್ಲಿ ತನ್ನ ಜೀವನ ವೃತ್ತಾಂತವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ತಾನು ಸಂಸ್ಥೆಯನ್ನು ಆರಂಭದಲ್ಲಿ ಪ್ರಾರಂಭಿಸಿದಾಗ ಅನುಭವಿಸಿದ ಕಷ್ಟಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ಆಡಳಿತ ನಿರ್ದೇಶಕ ಅಭಿನಂದನ್ ಶೆಟ್ಟಿ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಶ್ರೀನಿವಾಸ್ ಎ ಉಪಸ್ಥಿತರಿದ್ದರು.