
ಅಡಿಕೆ ವ್ಯಾಪಾರಿಗೆ ಚೂರಿಯಿಂದ ತಿವಿದು ಹಣ ಮತ್ತು ಚಿನ್ನಾಭರಣ ದರೋಡೆ
ಬಂಟ್ವಾಳ: ಚೂರಿಯಿಂದ ತಿವಿದು ಹಣ, ಚಿನ್ನ ಹಾಗೂ ಇತರ ಸೊತ್ತುಗಳನ್ನು ದೋಚಿದ ಘಟನೆ ಬಂಟ್ವಾಳ ಸಮೀಪದ ಪಜೆ ಕೋಡಿ ಎಂಬಲ್ಲಿ ಮಂಗಳವಾರ ನಡೆದಿದೆ
ಮಂಗಳವಾರ ಬಂಟ್ವಾಳ ತಾಲೂಕಿನ ಪೆರ್ನೆಯ ಆರ್ಶಿವಾದ ಕಟ್ಟಡದಲ್ಲಿ ಅಡಿಕೆ ಖರೀದಿ ವ್ಯಾಪಾರ ನಡೆಸುತ್ತಿದ್ದ ದೀಪಕ್ ಜಿ ಶೆಟ್ಟಿ ಎಂಬವರು ಅಡಿಕೆ ಮಾರಾಟ ಮಾಡಿದ ರೂ. 3,50,000 ಹಣವನ್ನು ಬ್ಯಾಗ್ ನಲ್ಲಿ ತುಂಬಿಸಿ ಅಂಗಡಿಯನ್ನು ಬಂದ್ ಮಾಡಿ ತನ್ನ ಮನೆಗೆ ಮೋಟಾರ್ ಸೈಕಲ್ ನಲ್ಲಿ ಹೋಗುತ್ತಿದ್ದಂತೆ ಸಂಜೆ 6:30 ಗಂಟೆಗ ಸಮಯಕ್ಕೆ ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮ ಪಜೆಕೋಡಿ ಎಂಬಲ್ಲಿಗೆ ತಲುಪುತ್ತಿದ್ದಂತೆ ದ್ವಿ ಚಕ್ರ ವಾಹನದಲ್ಲಿ ಬಂದ ಅಪರಿಚಿತರಿಬ್ಬರು ಪಿರ್ಯಾದಿದಾರರ ವಾಹನವನ್ನು ತಡೆದು ದ್ವಿ ಚಕ್ರ ವಾಹನದ ಸಹ ಸವಾರ ಪಿರ್ಯಾದಿದಾರರ ಬಲ ಭಾಗದ ತಲೆಯ ಭಾಗಕ್ಕೆ ಹಾಗೂ ಹೊಟ್ಟೆಯ ಭಾಗಕ್ಕೆ ಚೂರಿಯಿಂದ ತಿವಿದು ಸದರಿಯವರ ಬಳಿ ಚೀಲದಲ್ಲಿದ್ದ ರೂ : 3,50,000 /- ಹಣದ ಬ್ಯಾಗ್ , ಕುತ್ತಿಗೆಯಲ್ಲಿದ್ದ ಸುಮಾರು 1 ½ ಪವನ್ ತೂಕದ ಚಿನ್ನದ ಸರ ಹಾಗೂ ಲಾವಾ ಕಂಪನಿಯ ಮೊಬೈಲ್ ಸೆಟ್ ಕೂಡ ಕಾಣದೇ ಇದ್ದು ಅದನ್ನು ದರೋಡೆ ಮಾಡಿಕೊಂಡು ಹೋಗಿರುತ್ತಾರೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.