Home Mangalorean News Kannada News ಅಣ್ಣಾಮಲೈ ಸೇರಿ ನಾಲ್ವರು ಖಡಕ್ ಪೊಲೀಸ್ ಅಧಿಕಾರಿಗಳು ಬೆಂಗಳೂರಿಗೆ ವರ್ಗಾವಣೆ

ಅಣ್ಣಾಮಲೈ ಸೇರಿ ನಾಲ್ವರು ಖಡಕ್ ಪೊಲೀಸ್ ಅಧಿಕಾರಿಗಳು ಬೆಂಗಳೂರಿಗೆ ವರ್ಗಾವಣೆ

Spread the love

ಅಣ್ಣಾಮಲೈ ಸೇರಿ ನಾಲ್ವರು ಖಡಕ್ ಪೊಲೀಸ್ ಅಧಿಕಾರಿಗಳು ಬೆಂಗಳೂರಿಗೆ ವರ್ಗಾವಣೆ

ಚಿಕ್ಕಮಗಳೂರು: ಅಲೋಕ್ ಕುಮಾರ್ ಮತ್ತು ಗಿರೀಶ್ ಅವರಂತಹ ಖಡಕ್ ಪೊಲೀಸ್ ಅಧಿಕಾರಿಗಳನ್ನು ಸಿಸಿಬಿಗೆ ಹಾಕಿ, ದಂಧೆಕೋರರಿಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಬಿಸಿ ಮುಟ್ಟಿಸಿದ್ದಾರೆ. ಇದರ ಬೆನ್ನಲ್ಲೇ ಐವರು ಖಡಕ್ ಆಫೀಸರ್ ಗಳನ್ನು ವರ್ಗಾವಣೆ ಮಾಡಿದ್ದಾರೆ.

ಬೆಂಗಳೂರು ದಕ್ಷಿಣ ಡಿಸಿಪಿಯಾಗಿ ಅಣ್ಣಾ ಮಲೈ ಹಾಗೂ ಪೂರ್ವ ವಿಭಾಗ ಡಿಸಿಪಿಯಾಗಿ ರಾಹುಲ್ ಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದಾರೆ. ಬೆಂಗಳೂರು ವಿಭಾಗದ ಹೆಚ್ಚುವರಿ ಸಂಚಾರ ಆಯುಕ್ತರಾಗಿ ಹರಿಶೇಖರನ್, ಕೆಎಸ್‍ಆರ್‍ಪಿ 1ನೇ ಬೆಟಾಲಿಯನ್ ಕಮಾಂಡೆಂಟ್‍ಗೆ ಅಜಯ್ ಹಿಲೋರಿ ಹಾಗೂ ಚಿಕ್ಕಮಗಳೂರು ಎಸ್‍ಪಿಯಾಗಿ ಹರೀಶ್ ಪಾಂಡೆ ಅವರು ವರ್ಗಾವಣೆಯಾಗಿದ್ದಾರೆ.

ಹರೀಶ್ ಪಾಂಡೆ ಅವರು ಈ ಹಿಂದೆ ಸಿಐಡಿ ಎಸ್ಪಿ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.ಎಸ್‍ಐಟಿ ಅಧಿಕಾರಿಯಾಗಿ ಅವರು ಗೌರಿ ಲಂಕೇಶ್ ಹತ್ಯೆ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದರೆಂದು ತಿಳಿದು ಬಂದಿದೆ.

ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಅವರು ವರ್ಗಾವಣೆಯಾಗಲಿದ್ದಾರೆ ಎಂಬ ಮಾತು ಕಳೆದ ಅನೇಕ ದಿನಗಳಿಂದ ಕೇಳಿ ಬರುತ್ತಿತ್ತು. ವಿಧಾನಸಭೆ ಚುನಾವಣೆ ನಂತರ ಸರಕಾರ ರಚನೆ ಸರ್ಕಸ್ಸ್‍ನಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಎಸ್ಪಿ ಕೆ.ಅಣ್ಣಾಮಲೈ ಅವರನ್ನು ರಾಮನಗರಕ್ಕೆ ವರ್ಗಾವಣೆ ಮಾಡಲಾಗಿತ್ತು. ನಂತರ ನಡೆದ ರಾಜಕೀಯ ಬೆಳವಣಿಯಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಎಚ್.ಡಿ.ಕುಮಾರಸ್ವಾಮಿ ಅಲಂಕರಿಸುತ್ತಿದ್ದಂತೆ ಮತ್ತೆ ಅಣ್ಣಾಮಲೈ ಚಿಕ್ಕಮಗಳೂರಿನ ಎಸ್ಪಿಯಾಗಿ ಪುನಃ ನಿಯುಕ್ತಿಗೊಂಡಿದ್ದರು.


Spread the love

Exit mobile version