ಅತ್ತಾವರದಲ್ಲಿ ಕಾಲೇಜು ಯುವತಿಯರನ್ನು ವೇಶ್ಯಾವಾಟಿಕೆಗೆ ಬಳಕೆ ಆರೋಪ – ದಂಪತಿಗಳ ಬಂಧನ

Spread the love

ಅತ್ತಾವರದಲ್ಲಿ ಕಾಲೇಜು ಯುವತಿಯರನ್ನು ವೇಶ್ಯಾವಾಟಿಕೆಗೆ ಬಳಕೆ ಆರೋಪ – ದಂಪತಿಗಳ ಬಂಧನ

ಮಂಗಳೂರು: ನಗರದ ಅತ್ತಾವರದ ನಂದಿಗುಡ್ಡೆ ಬಳಿ ಅಪಾರ್ಟ್ ಮೆಂಟ್ ಒಂದರಲ್ಲಿ ನಡೆಸಲಾಗುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಪೊಲೀಸರು ದಾಳಿ ನಡೆಸಿ ಇಬ್ಬರು ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಶಮೀನಾ ಮತ್ತು ಆಯೇಶಮ್ಮ ಎಂದು ಗುರುತಿಸಲಾಗಿದೆ.

ಫೆಬ್ರವರಿ 3 ರಂದು ಅಪ್ರಾಪ್ತ ಯುವತಿಯೋರ್ವಳು ಪಾಂಡೇಶ್ವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು ಆಕೆಯ ದೂರಿನಂತೆ ಮಹಿಳಾ ಪೊಲೀಸರು ಅಪಾರ್ಟ್‌ ಮೆಂಟ್‌ ಗೆ ದಾಳಿ ನಡೆಸಿ ಶಮೀನಾ ಮತ್ತು ಆಯೇಶಮ್ಮ ಎಂಬವರನ್ನು ಬಂಧಿಸಿದ್ದಾರೆ.

ಪೊಲೀಸ್‌ ಮಾಹಿತಿಗಳ ಪ್ರಕಾರ ಶಮೀನಾ ಮತ್ತು ಆಕೆಯ ಪತಿ ಸಿದ್ದೀಕ್‌ ಬಾಡಿಗೆ ಮನೆಯಲ್ಲಿ ಜೀವಿಸುತ್ತಿದ್ದು ದಂಪತಿಗಳು ಅಪ್ರಾಪ್ತ ಯುವತಿಯಿರಿಗೆ ಬೆದರಿಸಿ ವೇಶ್ಯಾವಾಟಿಕೆಗೆ ಬಳಸಿಕೊಳ್ಳುತ್ತಿದ್ದರು. ಶಮೀನಾ ಮತ್ತು ಸಿದ್ದೀಕ್‌ ಅವರು ವೇಶ್ಯಾವಾಟಿಕೆ ದಂಧೆಯನ್ನು ಆಯೇಶಮ್ಮ ಮತ್ತು ಇತರರೊಂದಿಗೆ ಸೇರಿ ನಡೆಸುತ್ತಿದ್ದರು.

ಈ ಬಗ್ಗೆ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


Spread the love