ಅತ್ತಾವರ ಕೆಎಂಸಿ ಆಸ್ಪತ್ರೆಯಿಂದ ಅಲರ್ಜಿ ತಪಾಸಣಾ ಶಿಬಿರ
ಮಂಗಳೂರು: ಮಂಗಳೂರಿನ ಅತ್ತಾವರದ ಕೆಎಂಸಿ ಆಸ್ಪತ್ರೆಯ ಕಿವಿ, ಮೂಗು ಮತ್ತು ಗಂಟಲು ವಿಭಾಗದಲ್ಲಿಅಲರ್ಜಿಕ್ ರೈನೈಟಿಸ್ ತಪಾಸಣಾ ಶಿಬಿರವನ್ನು ನವೆಂಬರ್11 ರ ಮಂಗಳವಾರದಂದು ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 12:30ರವರೆಗೆ ಆಯೋಜಿಸಲಾಗಿದೆ. ಅಲರ್ಜಿಯಿಂದಾಗಿ ಪದೇ ಪದೇ ಸೀನುವುದು, ಮೂಗು ಸೋರುವುದು, ಮೂಗಿನ ಬ್ಲಾಕ್, ತಲೆನೋವು, ಮೂಗು, ಗಂಟಲು ಮತ್ತು ಕಣ್ಣುಗಳಲ್ಲಿ ತುರಿಕೆ, ಕಣ್ಣುಗಳಲ್ಲಿ ನೀರು ಬರುವುದು, ಕಣ್ಣಿನ ಒಳಚರ್ಮದ ಊತ, ನಿರಂತರ ಕೆಮ್ಮು, ಚರ್ಮ ತುರಿಕೆ, ತಲೆ ಸುತ್ತು ಹಾಗೂ ಉಸಿರಾಟದ ತೊಂದರೆಯಂಥ ಸಮಸ್ಯೆಗಳಿಂದ ಬಳಲುತ್ತಿರುವವರು ಈ ಶಿಬಿರದಲ್ಲಿ ಬಾಗವಹಿಸಿ ತಜ್ಞರನ್ನು ಕಾಣಬಹುದು.
ಶಿಬಿರದಲ್ಲಿ ಈ ಕೆಳಕಂಡ ಸೇವೆಗಳನ್ನು ಒದಗಿಸಲಾಗುತ್ತದೆ.
1. ಕಿವಿ, ಮೂಗು ಮತ್ತು ಗಂಟಲು ತಜ್ಞರೊಂದಿಗೆ ಉಚಿತ ಸಮಾಲೋಚನೆ.
2. ಮೂಗಿನ ಕಾರ್ಯವಿಧಾನಗಳು, ಮತ್ತು ರೇಡಿಯಾಲಜಿ ಪರೀಕ್ಷೆಗಳಲ್ಲಿ 20% ರಿಯಾಯಿತಿ.
3. ಪ್ರಯೋಗಾಲಯ ಪರೀಕ್ಷೆಗಳ ಮೇಲೆ 10% ರಿಯಾಯಿತಿ.
4. ಔಷಧಿಗಳ ಮೇಲೆ 10% ರಿಯಾಯಿತಿ.
ಹೆಚ್ಚಿನ ಮಾಹಿತಿಗಾಗಿ ಅಥವಾ ನೋಂದಾವಣೆಗಾಗಿ ದೂರವಾಣಿ ಸಂಖ್ಯೆ 70220 78002 ಅನ್ನು ಸಂಪರ್ಕಿಸಿ.
