
Spread the love
ಅತ್ತಾವರ ಬಾಬುಗುಡ್ಡೆ ಬಳಿ ಮನೆ ಕುಸಿತ, ಮಾಜಿ ಶಾಸಕ ಐವನ್ ಡಿ ಸೋಜ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ
ಅತ್ತಾವರ ಬಾಬುಗುಡ್ಡೆ ಬಳಿ ಶಾಂತಿ ಪೆಡ್ರಿಕ್‌ರವರ ಮನೆ ಸಂಪೂರ್ಣವಾಗಿ ಕುಸಿದಿದ್ದು ತಿಳಿದು, ಮಾಜಿ ಶಾಸಕರಾದ ಶ್ರೀ ಐವನ್ ಡಿ ಸೋಜ ಇವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಬೇಸರ ವ್ಯಕ್ತಪಡಿಸಿದರು. ಸರಕಾರದಿಂದ ಸಿಗುವ ಪರಿಹಾರವನ್ನು ಒದಗಿಸಿಕೊಡಲು ಸಹಾಯ ಮಾಡುವ ಭರವಸೆಯನ್ನು ನೀಡಿದರು.
ವೈದ್ಯನಾಥ ನಗರ ಅತ್ತಾವರ ಕೆ.ಎಂ.ಸಿ ಹಿಂಬದಿ ರಾಜ ಕಾಲುವೆ ತಡೆಗೋಡೆ ಕುಸಿದು, ಹಲವು ಮನೆಗಳಿಗೆ ನೀರು ತುಂಬಿ ನಷ್ಟವಾಗಿದ್ದು, ತಿಳಿದು, ಸ್ಥಳಕ್ಕೆ ಭೇಟಿ ನೀಡಿದ ಎಐಸಿಸಿ ಕಾರ್ಯದರ್ಶಿ ಮತ್ತು ಮಾಜಿ ಶಾಸಕರಾದ ಶ್ರೀ ಐವನ್ ಡಿ ಸೋಜ ಪರಿಶೀಲಿಸಿ, ಜಿಲ್ಲಾಧಿಕಾರಿಯವರನ್ನು ಸಂಪರ್ಕಿಸಿ, ಪರಿಹಾರ ಹಾಗೂ ಕಾಮಗಾರಿ ಮಾಡಿಸುವಂತೆ ಒತ್ತಾಯಿಸಿದರು.
ಭೇಟಿ ನೀಡಿದ ಸಂದರ್ಭದಲ್ಲಿ ಮಾಜಿ ಕಾರ್ಪೋರೇಟರ್ ಭಾಸ್ಕರ್ ರಾವ್, ಅಶಿತ್ ಪಿರೇರಾ, ದೀಕ್ಷಿತ್ ಅತ್ತಾವರ, ವಿಕ್ಟೋರಿಯಾ ಶಾಂತಿ, ಉಮಾವತಿ, ಅನ್ನು, ಸಾವಿತ್ರಿ, ಅಬಿಬುಲ್ಲ ಕಣ್ಣೂರು ಮುಂತಾದವರುಗಳು ಉಪಸ್ಥಿತರಿದ್ದರು.
Spread the love