ಅತ್ತೂರು ಬೆಸಿಲಿಕಾದ ಧರ್ಮಗುರು ವಂ| ಜೋರ್ಜ್‌ ಡಿಸೋಜಾರಿಗೆ ಬೀಳ್ಕೊಡುಗೆ

Spread the love

ಅತ್ತೂರು ಬೆಸಿಲಿಕಾದ ಧರ್ಮಗುರು ವಂ| ಜೋರ್ಜ್‌ ಡಿಸೋಜಾರಿಗೆ ಬೀಳ್ಕೊಡುಗೆ

ಕಾರ್ಕಳ: ಅತ್ತೂರು ಸಂತ ಲಾರೆನ್ಸ್‌ ಬಾಸಿಲಿಕದಲ್ಲಿ ಸೇವೆ ಸಲ್ಲಿಸಿ ಮೂಡುಬೆಳ್ಳೆ ಚರ್ಚಿಗೆ ವರ್ಗಾವಣೆ ಹೊಂದಿದ ವಂ| ಜೋರ್ಜ್ ತೋಮಸ್ ಡಿ ಸೋಜ ಅವರಿಗೆ ಚರ್ಚಿನ ವತಿಯಿಂದ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು.

ಜೋನ್ ಡಿ ಸಿಲ್ವಾ,ಸಂಘ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಧರ್ಮ ಗುರುಗಳು ಈ ಪುಣ್ಯ ಕ್ಷೇತ್ರದಲ್ಲಿ ಮಾಡಿದ ಸೇವೆಯನ್ನು ಸ್ಮ ರಿಸಿದರು.

ಚರ್ಚಿನ ಎಲ್ಲಾ ಮಾಜಿ ಉಪಾಧ್ಯಕ್ಷರುಗಳು ಸೇರಿ ಗುರುಗಳಿಗೆ ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿದರು.
ಫಾ.ಜೋರ್ಜ್ ರವರು ತಮ್ಮ ಅನುಭವಗಳನ್ನು ತಿಳಿಸಿ ಮನಃಪೂರ್ವಕವಾಗಿ ಕೃತಗ್ನತೆಗಳನ್ನು ಅರ್ಪಿಸಿದರು.

ವೇದಿಕೆಯಲ್ಲಿ ಫಾ.ಜೋರ್ಜ್ ಡಿ ಸೋಜ, ಪಾಲನಾ ಮಂಡಳಿ ಉಪಾಧ್ಯಕ್ಷ ಸಂತೋಷ್ ಡಿ ಸಿಲ್ವಾ, ಕಾರ್ಯದರ್ಶಿ ಬೆನೆಡಿಕ್ಟ ನೊರೋನ್ನ, ಕಾನ್ವೆಂಟ್ ನ ಸಿ.ಪ್ರೆಸಿಲ್ಲಾ, 18 ಆಯೋಗದ ಸಂಯೋಜಕ ರಿಚ್ಚರ್ಡ್ ಪಿಂಟೋ, ಉಪಸ್ಥಿತರಿದ್ದರು.

ಪಾಲನಾ ಮಂಡಳಿಯ ಉಪಾಧ್ಯಕ್ಷ ಸಂತೋಷ್ ಡಿ ಸಿಲ್ವಾ ಸ್ವಾಗತಿಸಿ, ಕಾರ್ಯದರ್ಶಿ ಬೆನಡಿಕ್ಟ ನೊರೊನ್ಹಾ ವಂದಿಸಿದರು.


Spread the love