ಅತ್ಯಂತ ನಿರಾಶಾದಾಯಕ ಬಜೆಟ್ – ಅಶೋಕ್ ಕುಮಾರ್ ಕೊಡವೂರು

Spread the love

ಅತ್ಯಂತ ನಿರಾಶಾದಾಯಕ ಬಜೆಟ್ – ಅಶೋಕ್ ಕುಮಾರ್ ಕೊಡವೂರು

ಉಡುಪಿ: ವಿತ್ತ ಸಚಿವರಾದ ನಿರ್ಮಲಾ ಸೀತರಾಮನ್ ಅವರು ಪಂಚರಾಜ್ಯ ಚುನಾವಣಾ ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಂಡಿಸಿದ್ದು ಅತ್ಯಂತ ನಿರಾಶಾದಾಯಕ ಬಜೆಟ್ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಪ್ರತಿಕ್ರಿಯಿಸಿದ್ದಾರೆ.

ನಿರೀಕ್ಷೆಯಂತೆ ತೆರಿಗೆ ಮಿತಿ 3 ಲಕ್ಷಕ್ಕೆ ಏರಿಕೆ ಕಂಡಿರುವುದರಲ್ಲಿ ವಿಶೇಷತೆಯಿಲ್ಲ ಆದರೆ ಸರಕಾರ ಪಡೆದ ಸಾಲಕ್ಕೆ ಬಡ್ಡಿಯ ಹೊರೆ ಅಧಿಕವಾಗಿ ಅದನ್ನು ಭರಿಸಲು ˌ ಯಾವುದೇ ಯೋಜನೆ ರೂಪಿಸಿಲ್ಲ ˌ ಕರ್ನಾಟಕದ ಜನತೆ ಪ್ರವಾಹ ಹಾಗೂ ಕೋವಿಡ್ ಸಮಯದಲ್ಲಿ ಸಂಕಷ್ಟದಲ್ಲಿದ್ದಾಗ ಸ್ವಂದಿಸದ ಕೇಂದ್ರಸರಕಾರ ಬಜೆಟ್ ನಲ್ಲಿ ರೈತರನ್ನು ದೃಷ್ಟಿಯಲ್ಲಿಟ್ಟುಕೊಂಡು ಭದ್ರಾ ಮೇಲ್ದಂಡೆ ಯೋಜನೆಗೆ 5,300ಕೋಟಿ ಇರಗೊಡಿಸಿರುದನ್ನೆ ಕರ್ನಾಟಕಕ್ಕೆ ಬಹುದೊಡ್ಡ ಕೊಡುಗೆ ಎನ್ನಲಾಗದು ˌ ಜಿಎಸ್ ಟಿ ತೆರಿಗೆ ಮಿತಿಯನ್ನು ಕಡಿತಗೊಳಿಸದೆ ವಸ್ತುಗಳ ಬೆಲೆ ಕಡಿತಗೊಳ್ಳದು ಹಾಗೂ ವಲಯಗಳ ಉತ್ತೇಜನಕ್ಕೆ ಸಹಕಾರಿಯಾಗದುˌ ಕೆಲವು ವಲಯಗಳನ್ನು ಸಂಪೂರ್ಣ ಕಡೆಗಣಿಸಿದೆ ಎಂದು ಅವರು ತಿಳಿಸಿದ್ದಾರೆ.


Spread the love