
ಅದಿತಿ ಆರ್ಟ್ ಗ್ಯಾಲರಿಯಲ್ಲಿ ಮೈ ಮಣಿಪಾಲ್ ವರ್ಣ ಚಿತ್ರ ಕಲಾ ಪ್ರದರ್ಶನ ಅನಾವರಣ
ಉಡುಪಿ: ಪ್ರಕೃತಿಯೊಂದಿಗೆ ನಗರ ಭೂ ಸದೃಶಗಳನ್ನು ಸದಾ ಸ್ಮರಣೆಯಲ್ಲಿ ಇಡುವಂತೆ ಮಾಡುವ ಅದ್ಭುತ ಶಕ್ತಿ ಕಲಾವಿದರಲ್ಲಿದೆ. ಅದು ಹೆಚ್ಚು ಪಸರಿಸುವಂತಾಗಬೇಕೆಂದು ಮಾಹೆಯ ಸಹ ಕುಲಾಧಿಪತಿ ಡಾ. ಕಾರ್ಕಳ ಶರತ್ ಕುಮಾರ್ ಹೇಳಿದರು.
ಅವರು ಅದಿತಿ ಆರ್ಟ್ ಗ್ಯಾಲರಿಯಲ್ಲಿ ಶುಕ್ರವಾರ ಆರಂಭವಾದ ಮಣಿಪಾಲ ಕೆ ಎಂ ಸಿ ಯ ಎಮ್ ಡಿ ವೈದ್ಯಕೀಯ ವಿದ್ಯಾರ್ಥಿ ಡಾ. ಸಾಲ್ವ್ಯ ಎಸ್. ರಾಜ್ ಅವರು ಮಣಿಪಾಲ ಕುರಿತಾಗಿ ರಚಿಸಿದ ಜಲವರ್ಣ ಕಲಾಕೃತಿಗಳ ಪ್ರದರ್ಶನ “ಮೈ ಮಣಿಪಾಲ್ ” ಉದ್ಘಾಟಿಸಿ ಮಾತನಾಡಿದರು .
ಅನುಪಮವಾದ ವಿದ್ಯಾರ್ಥಿ ಜೀವನದಲ್ಲಿ ಚಿತ್ರಕಲೆಯತ್ತ ಆಸಕ್ತಿ ಹೊಂದಿರುವುದು ಶ್ಲಾಘನರ್ಹ. ಅದೂ ವಿಶೇಷವಾಗಿ ಉಡುಪಿ -ಮಣಿಪಾಲದ ಕುರಿತಾಗಿ ಜಲವರ್ಣ ಚಿತ್ರಗಳು ನಿರ್ಮಿಸಿರುವುದು ಕಲಾ ಸಂಗ್ರಹಕಾರರಿಗೆ ಉತ್ತೇಜನೆ ನೀಡಿದೆ ಅಂದು ಹೇಳಿದರು.
ಕಲಾವಂತರಿಗೆ, ಕಲಾಸಕ್ತರಿಗೆ ಅದಿತಿ ಆರ್ಟ್ ಗ್ಯಾಲರಿ ಒಂದು ಹೊಸ ಸ್ವರೂಪದಲ್ಲಿ ಕಲಾಶ್ರಯ ನೀಡುತ್ತಿದೆ. ಮುಂದೆಯೂ ಈ ಪ್ರೋತ್ಸಾಹ ಮುಂದುವರೆಯಲಿ ಎಂದು ಶುಭ ಹಾರೈಸಿದರು
ಕೆ ಎಂ ಸಿ ಯ ಡೀನ್ ಡಾ. ಪದ್ಮರಾಜ್ ಹೆಗ್ಡೆ ಮೈ ಮಣಿಪಾಲ ಸ್ಟಿಕ್ಕರ್ಗಳನ್ನು ಹಾಗೂ ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ . ರವಿರಾಜ್ ಆಚಾರ್ಯ ವಿಶೇಷ ಕಾರ್ಡಗಳನ್ನು ಅನಾವರಣಗೊಳಿಸಿದರು.
ಗ್ಯಾಲರಿಯ ಆಡಳಿತ ವಿಶ್ವಸ್ಥರಾದ ಡಾ . ಕಿರಣ್ ಆಚಾರ್ಯ ಸ್ವಾಗತಿಸಿ, ಕಲಾವಿದೆ ಡಾ. ಸಾಲ್ವ್ಯ ಎಸ್. ರಾಜ್ ವಂದಿಸಿದರು .
ಪ್ರದರ್ಶನವು ಎ. 29 ರಿಂದ ಮೇ 1 ರವರೆಗೆ ಬೆಳಗ್ಗೆ 11 ರಿಂದ ಸಂಜೆ 7 ರವರೆಗೆ ಕಲಾಸಕ್ತರ ವೀಕ್ಷಣೆಗೆ ವ್ಯವಸ್ಥೆ ಗೊಳಿಸಲಾಗಿದೆ.