ಅದ್ಧೂರಿಯಾಗಿ ನಡೆದ ಕಾರ್ಯ ಸಿದ್ದೇಶ್ವರ ಜಾತ್ರೆ

Spread the love

ಅದ್ಧೂರಿಯಾಗಿ ನಡೆದ ಕಾರ್ಯ ಸಿದ್ದೇಶ್ವರ ಜಾತ್ರೆ

ಮೈಸೂರು: ನಂಜನಗೂಡು ತಾಲೂಕಿನ ಕಾರ್ಯ ಗ್ರಾಮದ ಪ್ರಸಿದ್ಧವಾದ ಸಿದ್ದೇಶ್ವರ ಬೆಟ್ಟದ ಜಾತ್ರೆಯು ಬಹಳ ವಿಜೃಂಭಣೆಯಿಂದ ಜರಗಿತು. ಲಕ್ಷಾಂತರ ಮಂದಿ ಪಾಲ್ಗೊಂಡು ಸಿದ್ದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರು.

ಮುಂಜಾನೆ ವೇಳೆಯಲ್ಲಿ ವಾಟಾಳು ಶ್ರೀಮಠದಿಂದ ಪಲ್ಲಕ್ಕಿ ಉತ್ಸವಕ್ಕೆ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ನಂತರ ಗ್ರಾಮದಿಂದ 12 ಗಂಟೆಗೆ ಹೊರಟ ರಥವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಕ್ತಾಧಿಗಳ ಸಮ್ಮುಖದಲ್ಲಿ ಸಿದ್ದೇಶ್ವರ ಬೆಟ್ಟಕ್ಕೆ ಸುಲಲಿತವಾಗಿ. ಶಾಂತಿಯುತವಾಗಿ. ಕಾರ್ಯ ಸಿದ್ದೇಶ್ವರ ಬೆಟ್ಟಕ್ಕೆ 2. ಗಂಟೆ 20 ನಿಮಿಷಕ್ಕೆ ಸಿದ್ದೇಶ್ವರ ಬೆಟ್ಟವನ್ನು ತಲುಪಿತು.

ಜಾತ್ರೆಯಲ್ಲಿ ತಿ.ನರಸೀಪುರ. ನಂಜನಗೂಡು. ಕೊಳ್ಳೇಗಾಲ. ಗುಂಡ್ಲುಪೇಟೆ. ಚಾಮರಾಜನಗರ. ಮಂಡ್ಯ. ಎಚ್ ಡಿ ಕೋಟೆ. ಮುಂತಾದ ತಾಲ್ಲೂಕು ಹಾಗೂ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಪಾಲ್ಗೊಂಡಿದ್ದರು. ಜಾತ್ರೆಯು ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ಸರಳವಾಗಿ ಆಚರಿಸಿಸಲಾಗಿತ್ತು. ಆದರೆ ಈ ಬಾರಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಜಾತ್ರೆಯು ಶಾಂತಿಯುತವಾಗಿ ಸುಲಲಿತವಾಗಿ. ನಡೆಸಲು ನಂಜನಗೂಡು ಡಿ.ವೈ.ಎಸ್ಪಿ ಗೋವಿಂದರಾಜು. ತಹಸಿಲ್ದಾರ್. ಶಿವಮೂರ್ತಿ. ಸರ್ಕಲ್ ಇನ್ಸ್ಪೆಕ್ಟರ್. ಲಕ್ಷ್ಮೀಕಾಂತ ತಳವಾರ್. ಕೌಲಂದೆ ಸಬ್ ಇನ್ಸ್ ಪೆಕ್ಟರ್ ಮಹೇಂದ್ರ, ಬಿಲಿಗೆರೆ ಸಬ್ ಇನ್ಸ್ ಪೆಕ್ಟರ್ ಆರತಿ. ಸೇರಿದಂತೆ 200ಕ್ಕೂ ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿತ್ತು. ಜಾತ್ರೆಯಲ್ಲಿ ರೈತರು, ಸುತ್ತಮುತ್ತ ಗ್ರಾಮಸ್ಥರು ಹಸು ಹಾಗೂ ಎತ್ತಿನಗಾಡಿಯ ಮೆರವಣಿಗೆಯಲ್ಲಿ ಆಗಮಿಸಿ ಸಿದ್ದೇಶ್ವರ ಬೆಟ್ಟದಲ್ಲಿ ಪಂಜಿನ ಸೇವೆ ಮಾಡಿದ್ದು ವಿಶೇಷವಾಗಿತ್ತು.


Spread the love