ಅಧಿಕಾರ ದರ್ಪವಿಲ್ಲದ ಅಪರೂಪದ ರಾಜಕಾರಣಿ ವಿನಯ ಕುಮಾರ್ ಸೊರಕೆ – ನಿಖಿತ್ ರಾಜ್ ಮೌರ್ಯ

Spread the love

ಅಧಿಕಾರ ದರ್ಪವಿಲ್ಲದ ಅಪರೂಪದ ರಾಜಕಾರಣಿ ವಿನಯ ಕುಮಾರ್ ಸೊರಕೆ – ನಿಖಿತ್ ರಾಜ್ ಮೌರ್ಯ

ಕಾಪು: ಅಧಿಕಾರ ದರ್ಪವಿಲ್ಲದ ಅಪರೂಪದ ರಾಜಕಾರಣಿ ವಿನಯ ಕುಮಾರ್ ಸೊರಕೆ.ಕಾರ್ಯಕರ್ತರಿಗೆ ಅತ್ಯಂತ ಗೌರವ ಕೊಡುವ ಬಡವರ ಪರ ಕಾಳಜಿ ಇರೋ ರಾಜಕಾರಣಿ ಕಾಪು ಕ್ಷೇತ್ರಕ್ಕೆ ಸಿಕ್ಕಿದ್ದಾರೆ ಅದು ನಿಮ್ಮೆಲ್ಲರ ಭಾಗ್ಯ ಎಂದು ಕಾಂಗ್ರೆಸ್ ವಕ್ತಾರ ನಿಖಿತ್ ರಾಜ್ ಮೌರ್ಯ ಹೇಳಿದ್ದಾರೆ. ಮುದರಂಗಡಿ ಪೇಟೆಯಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಈ ಭಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದೇ ಬರುತ್ತೆ ಅಂತಾ ಎಲ್ಲಾ ಸಮೀಕ್ಷೆಯಲ್ಲಿ ನಿಜವಾಗಿದೆ. ಕಾಪುವಿನಲ್ಲಿ ವಿನಯಣ್ಣ ಶಾಸಕರಾದರೆ ಮಂತ್ರಿ ಅಗೇ ಆಗ್ತಾರೆ. ಕಾಪು ಇನ್ನೆಂದು ಕಾಣದ ಭಾರೀ ಅಭಿವೃದ್ಧಿಯಾಗುತ್ತದೆ ಎಂದರು.

ಬಿಜೆಪಿ ಭಾರೀ ಸೋಲಿನ ಹತಾಶೆಯಲ್ಲಿದೆ.ಸೋಲಿನ ಭಯದಲ್ಲಿ ಪ್ರಧಾನಿಯವರನ್ನು ದಾಖಲೆ ಸಂಖ್ಯೆಯಲ್ಲಿ ರಾಜ್ಯಕ್ಕೆ ಕರೆಯಿಸಿ ಪ್ರಚಾರ ಮಾಡಿದ ಕೀರ್ತಿ ಕರ್ನಾಟಕ ಬಿಜೆಪಿಗೆ ಇದೆ ಎಂದು ಮೌರ್ಯ ಲೇವಡಿ ಮಾಡಿದರು.

ವಿನಯಣ್ಣ ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಇರೋ ರಾಜಕಾರಣಿ ಯಾವುದೇ ಭ್ರಷ್ಟಚಾರ, ದುರಾಡಳಿತ ಆರೋಪ ವಿನಯಣ್ಣನ ಮೇಲೆ ಇಲ್ಲ. ಸೊರಕೆ ಕೈ ಹಿಡಿದು ಈ ಬಾರಿ ಗೆಲ್ಲಿಸುವ ಕರ್ತವ್ಯವನ್ನು ಮತದಾರರು ಮಾಡಬೇಕಿದೆ. ರಾಜ್ಯ ಬಿಜೆಪಿ ಸರ್ಕಾರ ಲಂಚ ಭ್ರಷ್ಟಾಚಾರದಿಂದಾಗಿ 5000 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಸರ್ಕಾರಿ ಶಾಲೆಗಳನ್ನು ಮುಚ್ಚಿ ಬಡ ಜನರನ್ನು ಶಿಕ್ಷಣ ವಂಚಿತರನ್ನಾಗಿಸುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ,ಮಾಜಿ ಶಾಸಕಿ ಶಕುಂತಳಾ ಶೆಟ್ಟಿ , ಕಾಂಗ್ರೆಸ್ ಮುಖಂಡರಾದ ಕ್ರಷ್ಣ ಪೂಜಾರಿ,ಮೈಕಲ್ ಡಿಸೋಜ, ಅಬ್ದುಲ್ ಅಜೀಜ್, ಸೋಮನಾಥ್, ಸುನೀಲ್ ರಾಜ್ ಶೆಟ್ಟಿ, ರೋಹನ್ ,ರಮೀಜ್, ಅಜೀಜ್, ಡೇವಿಡ್ ಡಿಸೋಜ, ಜಿತೇಂದ್ರ ಫುಟಾರ್ಡೊ, ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here