ಅನಾರೋಗ್ಯದ ನಡುವೆಯೂ ಆಸ್ಕರ್‌ ಆರೋಗ್ಯ ವಿಚಾರಣೆಗೆ ಆಸ್ಪತ್ರೆಗೆ ಆಗಮಿಸಿದ ಜನಾರ್ದನ ಪೂಜಾರಿ

Spread the love

ಅನಾರೋಗ್ಯದ ನಡುವೆಯೂ ಆಸ್ಕರ್‌ ಆರೋಗ್ಯ ವಿಚಾರಣೆಗೆ ಆಸ್ಪತ್ರೆಗೆ ಆಗಮಿಸಿದ ಜನಾರ್ದನ ಪೂಜಾರಿ

ಮಂಗಳೂರು: ಅನಾರೋಗ್ಯದ ಮಧ್ಯೆಯೂ ತಮ್ಮ ಆಪ್ತರಾದ ಕಾಂಗ್ರೆಸ್‌ ಹಿರಿಯ ಮುಖಂಡ ಆಸ್ಕರ್‌ ಫೆರ್ನಾಂಡಿಸ್‌ ಆಸ್ಪತ್ರೆಗೆ ದಾಖಲಾಗಿರುವ ವಿಚಾರ ತಿಳಿದು ಆರೋಗ್ಯ ವಿಚಾರಿಸಲು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಮಂಗಳೂರಿನ ಯೆನೆಪೋಯಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಹಲವು ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಜನಾರ್ದನ ಪೂಜಾರಿ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಸ್ಕರ್ ಫರ್ನಾಂಡಿಸ್‌ರನ್ನು ನೋಡಿ, ಆರೋಗ್ಯ ವಿಚಾರಣೆ ಮಾಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.

ಆಸ್ಪತ್ರೆಗೆ ಭೇಟಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ, ಆಸ್ಕರ್ ಬಗ್ಗೆ ಮಾತನಾಡುತ್ತಾ ಗದ್ಗದಿತರಾಗಿದ್ದಾರೆ.

ಆಸ್ಕರ್ ಫರ್ನಾಂಡೀಸ್ ಆರೋಗ್ಯ ವಿಚಾರಿಸಿ ಜನಾರ್ದನ ಪೂಜಾರಿ ಕಣ್ಣೀರಿಟ್ಟ ಅವರು, ಆಸ್ಕರ್ ಆರೋಗ್ಯವಾಗಿ ಬರುತ್ತಾರೆ ದೇವರು ಅವರಿಗೆ ಸಹಾಯ ಮಾಡುತ್ತಾರೆ. ಶೀಘ್ರ ಗುಣಮುಖರಾಗಲೆಂದು ನಾನೂ ದೇವರಲ್ಲಿ ಪ್ರಾರ್ಥಿಸುತ್ತೇನೆ ಅಂತಾ ಜನಾರ್ದನ ಪೂಜಾರಿ ಹೇಳಿದ್ದಾರೆ.


Spread the love

Leave a Reply