ಅನೈತಿಕ ಚಟುವಟಿಕೆಯಲ್ಲಿ ತೊಡಗಿಕೊಂಡ ಮಹಿಳೆಯ ಬಂಧನ

Spread the love

ಅನೈತಿಕ ಚಟುವಟಿಕೆಯಲ್ಲಿ ತೊಡಗಿಕೊಂಡ ಮಹಿಳೆಯ ಬಂಧನ

ಮಂಗಳೂರು: ಅನೈತಿಕ ಚಟುವಟಿಕೆಯಲ್ಲಿ ತೊಡಗಿಕೊಂಡ ಮಹಿಳೆಯನ್ನು ಉಳ್ಳಾಲ ಪೊಲೀಸರು ಬಂಧೀಸಿದ್ದಾರೆ,

ಬಂಧಿತ ಮಹಿಳೆಯನ್ನು ಬಂಟ್ವಾಳ ನಿವಾಸಿ ರುಕಿಯಾ(50) ಎಂದು ಗುರುತಿಸಲಾಗಿದೆ.

ದಿನಾಂಕ. 7-3-2023 ರಂದು ಉಳ್ಳಾಲ ತಾಲೂಕು ಪೆರ್ಮನ್ನೂರು ಗ್ರಾಮದ ಪಂಡಿತ್ ಹೌಸ್ ವಿಜೇತ ನಗರದಲ್ಲಿರುವ YANVI ಎಂಬ ಹೆಸರಿನ ಮನೆಯಲ್ಲಿ ವಾಸವಾಗಿರುವ ರುಕಿಯಾ ರವರ ಮನೆಯಲ್ಲಿ ಕೆಲವು ಮಂದಿ ಗಂಡಸರು ಹಾಗೂ ನಾಲ್ಕು ಜನ ಹೆಂಗಸರು ಅನೈತಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ ಎಂಬುದಾಗಿ ದೊರೆತ ಖಚಿತ ಮಾಹಿತಿ ಮೇರೆಗೆ ಸದ್ರಿ ಸ್ಥಳಕ್ಕೆ ಧಾಳಿ ನಡೆಸಲು ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು, ಮಂದ.ಉ, ರವರಿಂದ ಸರ್ಚ್ ವಾರಂಟು ಪಡೆದುಕೊಂಡು, ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು, ಮಂಗಳೂರು ದಕ್ಷಿಣ ಉಪ ವಿಭಾಗ ರವರ ಮಾರ್ಗದರ್ಶನದಂತೆ ಉಳ್ಳಾಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಸಂದೀಪ್.ಜಿ.ಎಸ್, ಪೊಲೀಸ್ ಉಪ- ನಿರೀಕ್ಷಕರಾದ ಮಂಜುಳಾ ಎಲ್. ಹಾಗೂ ಸಿಬ್ಬಂದಿಗಳೊಂದಿಗೆ ಪಂಚಾಯತುದಾರರ ಸಮಕ್ಷಮದಲ್ಲಿ ಧಾಳಿ ನಡೆಸಿ ಪ್ರಕರಣವನ್ನು ಪತ್ತೆ ಹಚ್ಚಿ ರುಕಿಯಾ ಪ್ರಾಯ 50 ವರ್ಷ ಗಂಡ ದಿ| ಮೊಯಿದ್ದೀನ್, ವಾಸ : ಡೋರ್ ನಂಬ್ರ 119(2), ವಿಟ್ಲಕೋಡಿ ಮನೆ, ಬೋಳಂತೂರು ಗ್ರಾಮ, ಬಂಟ್ವಾಳ ತಾಲೂಕು, ದ.ಕ ಜಿಲ್ಲೆ ಮತ್ತು ಲತೀಫ್ ಎಂಬವರುಗಳ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮೊ.ನಂ. 25/2023 ಕಲಂ ಕಲಂ 4, 5, 6 ಐ.ಟಿ.ಪಿ ಆ್ಯಕ್ಟ್ 1956 ಮತ್ತು ಕಲಂ 370 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಈ ಪ್ರಕರಣದಲ್ಲಿ ದಸ್ತಗಿರಿಯಾದ ರುಕಿಯಾ ರವರನ್ನು ಕ್ರಮದಂತೆ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿ ಲತೀಫ್ ದಸ್ತಗಿರಿಗೆ ಬಾಕಿ ಇರುತ್ತದೆ.

ಈ ಪ್ರಕರಣದಲ್ಲಿ ತಕ್ಷೀರಿಗೆ ಸಂಬಂದಪಟ್ಟಂತೆ 3 ದ್ವಿಚಕ್ರ ವಾಹನಗಳು, 9-ಮೊಬೈಲ್ ಫೋನ್ಗಳು ನಗದು ಹಣ ರೂ. 5,000/- ಹೀಗೆ ಒಟ್ಟು ರೂ.1,76,580-00 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು, ಮಂಗಳೂರು ದಕ್ಷಿಣ ಉಪ ವಿಭಾಗ ರವರ ಮಾರ್ಗದರ್ಶನದಂತೆ ಈ ಪತ್ತೆ ಕಾರ್ಯದಲ್ಲಿ ಉಳ್ಳಾಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಸಂದೀಪ್ ಜಿ.ಎಸ್ ಹಾಗೂ ಪಿ.ಎಸ್.ಐ – ಮಂಜುಳಾ ಎಲ್, ಉಳ್ಳಾಲ ಠಾಣಾ ಸಿಬ್ಬಂದಿಗಳಾದ ಸಿ.ಹೆಚ್.ಸಿ 319 ನೇ ಮಂಜುನಾಥ ಎನ್, ಸಿಪಿಸಿ 2424 ವಾಸುದೇವ ಚವ್ಹಾಣ್, ಮ್.ಪಿ.ಸಿ 2408 ದ್ರಾಕ್ಷಾಯಿಣಿ, ಮ.ಪಿ.ಸಿ 3275 ಲಕ್ಷ್ಮೀ ಹಾಗೂ ಎಸಿಪಿ ಸ್ಟ್ರಾಡ್ನ ಸಿಬ್ಬಂದಿಯವರಾದ ಸಿ.ಹೆಚ್.ಸಿ 333 ರೆಜಿ ರವರು ಭಾಗವಹಿಸಿರುತ್ತಾರೆ.


Spread the love

Leave a Reply

Please enter your comment!
Please enter your name here