ಅನ್ನಭಾಗ್ಯ ಅಕ್ಕಿ ಅಕ್ರಮ ಮಾರಾಟ: 8ಮಂದಿ ಬಂಧನ

Spread the love

ಅನ್ನಭಾಗ್ಯ ಅಕ್ಕಿ ಅಕ್ರಮ ಮಾರಾಟ: 8ಮಂದಿ ಬಂಧನ

ತಿ.ನರಸೀಪುರ: ಅನ್ನ ಭಾಗ್ಯ ಅಕ್ಕಿ ಮತ್ತು ರಾಗಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಗೋದಾಮಿನ ಮೇಲೆ ದಾಳಿ ನಡೆಸಿದ ಪೊಲೀಸರು ಎಂಟು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಪಟ್ಟಣದ ಲಿಂಕ್ ರಸ್ತೆಯ ಟಿ.ಎ.ಪಿ.ಎಂ.ಎಸ್ ಸಹಕಾರ ಸಂಘದ ಆವರಣದಲ್ಲಿನ ಗೋದಾಮಿನಲ್ಲಿ ಅನ್ನ ಭಾಗ್ಯ ಅಕ್ಕಿ ಮತ್ತು ರಾಗಿ ಶೇಖರಣೆ ಮಾಡಿ ಅಲ್ಲಿಂದ ಕ್ಯಾಂಟರ್ ಮೂಲಕ ರಾಗಿ ಮತ್ತು ಅಕ್ಕಿಯನ್ನು ಕಾಳ ಸಂತೆಯಲ್ಲಿ ವ್ಯಾಪಾರ ಮಾಡಲು ಗೂಡ್ಸ್ ವಾಹನಕ್ಕೆ ತುಂಬುತ್ತಿದ್ದ ವೇಳೆ ಬಾತ್ಮೀದಾರರ ಖಚಿತ ಮಾಹಿತಿ‌ ಆದರಿಸಿ ಎಸ್.ಪಿ ಚೇತನ್ ಮತ್ತು ‌ಡಿ.ವೈ.ಎಸ್.ಪಿ ಗೋವಿಂದರಾಜ್ ಮಾರ್ಗದರ್ಶನದಲ್ಲಿ ಪಟ್ಟಣ ಠಾಣೆ ಸಬ್ ಇನ್ಸ್ ಪೆಕ್ಟರ್ ತಿರುಮಲ್ಲೇಶ್ ದಾಳಿ ಮಾಡಿ ಬಡವರ ಅಕ್ಕಿ ಮತ್ತು ಅಕ್ಕಿ ಸಾಗಾಣಿಕೆಗೆ ಬಳಸಿದ್ದ ಕ್ಯಾಂಟರ್ ಹಾಗೂ ಎರಡು ಸ್ಕೂಟರ್ ಸೇರಿದಂತೆ ಅನ್ನ ಭಾಗ್ಯ ಅಕ್ಕಿ ದಂಧೆಯಲ್ಲಿ ಭಾಗಿಯಾಗಿದ್ದ ಖದೀಮರನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸರು ದಾಳಿ ನಡೆಸಿದ ವೇಳೆ 187 ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದ 1.89.750 ಲಕ್ಷ ಮೌಲ್ಯದ 86.25 ಕ್ವಿಂಟಾಲ್ ಅಕ್ಕಿ ಹಾಗೂ 104 ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದ 1.49.464 ಲಕ್ಷ ಮೌಲ್ಯದ 43.96 ಕ್ವಿಂಟಾಲ್ ರಾಗಿ ಹಾಗೂ ಬಡವರ ಅಕ್ಕಿ ಸಾಗಾಣಿಕೆ ಮಾಡಲು ಬಳಸಿದ್ದ KA09HY2523, KA45EA5812 TVS XL ಮೊಪೈಡ್ ಎರಡು ವಾಹನ ಹಾಗೂ KA02 D6856 TATA 407 ಗೂಡ್ಸ್ ವಾಹನವನ್ನು ವಶಕ್ಕೆ ಪಡೆದು ಈ ಅಕ್ರಮದಲ್ಲಿ ಭಾಗಿಯಾಗಿದ್ದ ದಿನಸಿ ವ್ಯಾಪಾರಿ ಕುಮಾರಸ್ವಾಮಿ, ಕೂಲಿಗಾರಾದ ಸಿದ್ದರಾಜು, ಗಿರೀಶ್,

ಯೋಗೀಶ್,ವಾಸೀಮ್ ಅಕ್ರಮ್, ಮಹಮದ್ ತೌಸಿಫ್,ಶಾಹಿಲ್ , ಪುಟ್ಟಸ್ವಾಮಿ ಎಂಬ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಹಾಗೂ ಗೋದಾಮಿನ ಮಾಲೀಕ ಕಿರಣ್ ಮೇಲೂ ಸಹ ಪ್ರಕರಣ ದಾಖಲು ಮಾಡಲಾಗಿದೆ.

ಅನ್ನ ಭಾಗ್ಯ ಅಕ್ಕಿಯನ್ನು ಗೋದಾಮಿನಲ್ಲಿ ದಾಸ್ತಾನು ಮಾಡಿ ಕಾಳಸಂತೆಗೆ ಸಾಗಾಣಿಕೆ ಮಾಡುವ ವೇಳೆ ತಹಶೀಲ್ದಾರ್ ಸಿ.ಜಿ.ಗೀತಾ ಸ್ಥಳದಲ್ಲಿ ಮೊಕ್ಕಂ ಹೊಡಿದ್ದರು. ಸಾರ್ವಜನಿಕ ವಿತರಣೆಯ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮತ್ತು ಕಾಳ ಸಂತೆಯಲ್ಲಿ ಮಾರಾಟ ಮಾಡುವ ಯತ್ನದ ಬಗ್ಗೆ ಆಹಾರ ಇಲಾಖೆಯ ಅಧಿಕಾರಿ ದೇವಣ್ಣ ಆಹಾರ ಇಲಾಖೆ ಶಿರಸ್ತೇದಾರ್ ಎಲ್ ಮಂಜುನಾಥ್ ಹಾಗೂ ಆಹಾರ ನಿರೀಕ್ಷಕ ಕಂಠೀರವ ರವರ ಮಾರ್ಗದರ್ಶನದಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಕ್ರಮ ಅಕ್ಕಿ ದಾಸ್ತಾನು ದಾಳಿಯಲ್ಲಿ ಪೊಲೀಸ್ ಸಿಬ್ಬಂದಿ ಪ್ರಭಾಕರ್, ಶಂಕರ್, ಮಾದೇಶ್, ಅಜಯ್, ಜೀಪ್ ಚಾಲಕ ಮಹದೇವ್ ಭಾಗವಹಿಸಿದ್ದರು.


Spread the love