ಅನ್ಯಮತಿಯರಿಗೆ ಜಾತ್ರೆಗಳಲ್ಲಿ ವ್ಯಾಪಾರಕ್ಕೆ ನಿಷೇಧ – ಉಡುಪಿ ಜಿಲ್ಲಾ ಸೌಹಾರ್ದ ಸಮಿತಿಯಿಂದ ಪೇಜಾವರ ಸ್ವಾಮೀಜಿಗೆ ಮನವಿ ಸಲ್ಲಿಕೆ

Spread the love

ಅನ್ಯಮತಿಯರಿಗೆ ಜಾತ್ರೆಗಳಲ್ಲಿ ವ್ಯಾಪಾರಕ್ಕೆ ನಿಷೇಧ – ಉಡುಪಿ ಜಿಲ್ಲಾ ಸೌಹಾರ್ದ ಸಮಿತಿಯಿಂದ ಪೇಜಾವರ ಸ್ವಾಮೀಜಿಗೆ ಮನವಿ ಸಲ್ಲಿಕೆ

ಉಡುಪಿ: ಉಡುಪಿಯಲ್ಲಿ ಮುಸಲ್ಮಾನ ವ್ಯಾಪಾರಿಗಳಿಗೆ ವ್ಯಾಪಾರ ಬಹಿಷ್ಕಾರ ಹಾಕಿರುವುದರ ಕುರಿತು ಉಡುಪಿ ಜಿಲ್ಲಾ ಸೌಹಾರ್ದ ಸಮಿತಿಯಿಂದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯನ್ನು ಭೇಟಿ ಮಾಡಿ ಜಾತ್ರೆಗಳಲ್ಲಿ ವ್ಯಾಪಾರ ನಡೆಸಲು ಅವಕಾಶ ನೀಡುವಂತೆ ಮನವಿ ಮಾಡಲಾಯಿತು.

ಉಡುಪಿ ಜಿಲ್ಲಾ ಸೌಹಾರ್ದ ಸಮಿತಿಯ ಅಬೂಬಕ್ಕರ್‌ ಆತ್ರಾಡಿ ನೇತೃತ್ವದಲ್ಲಿ ಮುಸ್ಲಿಂ ವ್ಯಾಪಾರಿಗಳು ಬುಧವಾರ ಪೇಜಾವರ ಮಠದ ಶ್ರೀ ರಾಮ ವಿಠಲ ಸಭಾಭವನದಲ್ಲಿ ಸ್ವಾಮೀಜಿಗಳನ್ನು ಭೇಟಿ ಮಾಡಿ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನೀಷೇಧ ಹೇರಿರುವುದದರಿಂದ ಬೀದಿ ಬದಿ ವ್ಯಾಪಾರಿಗಳಿಗೆ ತುಂಬಾ ಸಮಸ್ಯೆಯಾಗಿದೆ ಆದ್ದರಿಂದ ಸ್ವಾಮೀಜಿಗಳು ಮಧ್ಯಪ್ರವೇಶಿಸಿ ದೇವಸ್ಥಾನಗಳ ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರಿಗೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಮುಸಲ್ಮಾನರು ಮತ್ತು ಕ್ರೈಸ್ತ ಮುಖಂಡರು ತಮ್ಮನ್ನು ಭೇಟಿ ಮಾಡಿ ವ್ಯಾಪಾರ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಸಮಾಜದಲ್ಲಿ ಶಾಂತಿ-ಸಾಮರಸ್ಯ ನೆಮ್ಮದಿ ಅವಶ್ಯಕವಾಗಿ ಬೇಕು ಆದರೆ ಒಂದು ಗುಂಪಿನಿಂದ ಸಾಮರಸ್ಯ ಸಾಧ್ಯವಿಲ್ಲ. ಹಿಂದೂ ಸಮಾಜ ಬಹಳ ಕಾಲದಿಂದ ನೋವನ್ನು ಉಂಡಿದ್ದು ಹಲವು ಅಹಿತಕರ ಘಟನೆಗಳಿಂದ ಹಿಂದೂ ಸಮಾಜದ ಇಂದು ನೋವಿನಲ್ಲಿದೆ ಎಂದರು.

ಕೇವಲ ನಾಲ್ಕು ಮಂದಿ ಧಾರ್ಮಿಕ ಮುಖಂಡರು ಕುಳಿತು ಮಾತನಾಡುವುದರಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಬದಲಾಗಿ ಇದಕ್ಕೆ ತಳಮಟ್ಟದಲ್ಲಿ ಇದಕ್ಕೆ ಪರಿಹಾರ ಆಗಬೇಕಾಗಿದೆ. ನಿರಂತರವಾಗಿ ಅನ್ಯಾಯವಾದಾಗ ಬೇಸರ ನೋವು ಸ್ಫೋಟವಾಗುತ್ತದೆ ಇಂದು ಹಿಂದೂ ಸಮಾಜ ನೋವು ಉಂಡು ಉಂಡು ಬೇಸರವಾಗಿ ಇಂದು ಸ್ಫೋಟಗೊಂಡಿದೆ. ಈ ಬೆಳವಣಿಗೆಗೆ ಕಾರಣ ಏನು ಎಂಬುದು ಒಂದೇ ವೇದಿಕೆಯಲ್ಲಿ ಕುಳಿತು ಚರ್ಚೆ ಮಾಡಬೇಕು. ಹಿಂದೂ ಸಮಾಜಕ್ಕೆ ನೋವಾಗುವ ಯಾವುದೇ ಘಟನೆಗಳು ನಡೆಯದಿದ್ದರೆ ಸಾಮರಸ್ಯ ಬೆಳೆಯಬಹುದು ಎಂದರು.

ವಿಧವೆ ಮಹಿಳೆಯ ಕೊಟ್ಟಿಗೆಯಲ್ಲಿದ್ದ ಎಲ್ಲಾ ಹಸುಗಳನ್ನು ಕಳ್ಳತನ ಮಾಡಲಾಗಿದೆ ಇಂದು ಆ ಮಹಿಳೆ ಬೀದಿಗೆ ಬೀಳುವ ವಾತಾವರಣ ನಿರ್ಮಾಣವಾಗಿದೆ ಇಂತಹ ಅನೇಕ ಘಟನೆಗಳು ಸಮಾಜದಲ್ಲಿ ನಡೆದು ನೋವು ಮಡುಗಟ್ಟಿದೆ. ನಾವು ಕೂಡ ಇಂತಹ ಹಲವಾರು ನೋವನ್ನು ಅನುಭವಿಸಿದ್ದೇವೆ ನಾವು ಶಾಂತಿ ಸಹಬಾಳ್ವೆಯಿಂದ ಇರೋಣ ಎಂದು ಬಾಯಲ್ಲಿ ಹೇಳಿದರೆ ಅದು ಸಾಧ್ಯವಿಲ್ಲ ಸಮಾಜದಲ್ಲಿ ಶಾಂತಿ ಸಹಬಾಳ್ವೆ ನೆಲಸಲು ಯಾರ ಮಧ್ಯಸ್ಥಿಕೆಯ ಬೇಡ. ಯಾರಿಂದ ಅನ್ಯಾಯವಾಗಿದೆ ಅವರು ಸಮಸ್ಯೆ ಸರಿ ಮಾಡಿಕೊಳ್ಳಬೇಕು, ತಪ್ಪು ಮಾಡಿದವರನ್ನು ಆ ಸಮಾಜ ಶಿಕ್ಷಿಸಲಿ ಮತ್ತು ಮಾಡಿದ ತಪ್ಪನ್ನು ಆ ಸಮಾಜ ಪ್ರತಿಭಟಿಸಲಿ. ಒಬ್ಬರು ಮಾಡಿದ ಅನ್ಯಾಯ ಇಡೀ ಸಮಾಜಕ್ಕೆ ತಟ್ಟುತ್ತದೆ ತಪ್ಪಿತಸ್ಥರಿಗೆ ಬೆನ್ನೆಲುಬಾಗಿ ನಿಲ್ಲದಿದ್ದರೆ ಹಿಂದೂ ಸಮಾಜಕ್ಕೆ ನೋವಾಗುವುದಿಲ್ಲ ಎಂದರು.


Spread the love

6 Comments

  1. Everyone must see that this spirit is implimented in true spirit and not to fall for any false commitment and promises

  2. ನೇರ.. ದಿಟ್ಟ. ನಿರಂತರ!!! His Holiness Pejavara Saint has unequivocally shot the salvo👌🏼 Sanathanis have sustained the misrule, discriminations for 12 centuries & in the post independent Bharath Gandhis-Nehrus cheated us dividing MaaBharathi into 4 chunks. The results of division showing up now in the last 2 years of Hindu alerts.. We were innocent, asleep, ignorant, non-united!! Now, with Modi ji, Yogi ji, Tejasvi Surya like politicians & Pejavar, Puthige Sri, Srungeri like saints taking up our genuine cause, we all, in crores should support them to end this menace 👍🕉️🇮🇳💐… Dr. Sudarshana Bharatiya

  3. Positive effect of action and reactions.
    Do not underestimate the power of Hindu Unity

  4. ಪೂಜ್ಯ ಸ್ವಾಮೀಜಿಯವರಿಗೆ ಸಾಷ್ಟಾಂಗ ನಮನಗಳು, ಸಮರ್ಪಕವಾಗಿ ಹೇಳಿದಿರಿ ಗುರುಗಳೇ ಸಮಸ್ತ ಹಿಂದೂ ಬಂದವರ ನೋವನ್ನು ಅರಿತು ಉತ್ತರ ಕೊಟ್ಟಿದಿರಿ, ಧನ್ಯವಾದಗಳು 🙏

  5. ಯಾರಿಗೂ ಇವರ ಮಾತಿಂದ ನೋವು ಆಗೋದಿಲ್ಲ ಆ ರೀತಿ ಉತ್ತರ ಕೊಟ್ಟಿದ್ದಾರೆ ಪೂಜ್ಯರು ಯಾರಿಂದ ಸಹಬಾಳ್ವೆಗೆ ಭಂಗ ಆಗಿದೆ ಅವರೇ ಸರಿ ಆಗದೆ ಇದ್ದರೆ ಹಿಂದೂಗಳು ಏನು ಮಾಡ್ತಾರೆ

  6. ಬಹಳ ಸಮಂಜಸವದ ಉತ್ತರ. ಪರಮ ಪೂಜ್ಯ ಸ್ವಾಮೀಜಿಗಳಿಗೆ, ಸಾಸ್ಟಂಗ ವಂದನೆಗಳು 🙏🙏🙏

Comments are closed.