
Spread the love
ಅಪಘಾತಕ್ಕೀಡಾಗಿದ್ದ ಯುವಕರನ್ನು ತನ್ನ ಕಾರಿನಲ್ಲೇ ಆಸ್ಪತ್ರೆಗೆ ಸೇರಿಸಿದ ಮಾಜಿ ಶಾಸಕ ಮೊಹಿದೀನ್ ಬಾವ
ಸದಾ ಮಾನವೀಯ ಸೇವೆಗಳ ಮೂಲಕ ಜನ ಹೃದಯಗಳಲ್ಲಿ ಸ್ಥಾನ ಪಡೆದ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಡಾ.ಬಿ.ಎ.ಮೊಹಿದೀನ್ ಬಾವ ಅವರು ತಮ್ಮ ಕಾರಿನಲ್ಲಿ ಸಂಚರಿಸುತ್ತಿರುವಾಗ ಪುತ್ತೂರಿನ ಇಬ್ಬರು ಯುವಕರ ಬೈಕ್ ಅಪಘಾತಕ್ಕೀಡಾಗಿತ್ತು.
ತಕ್ಷಣ ತನ್ನ ಕಾರು ನಿಲ್ಲಿಸಿದ ಮೊಹಿದೀನ್ ಬಾವ ಅವರು ಗಾಯಾಳುಗಳಿಬ್ಬರನ್ನು ತನ್ನ ಕಾರಿನಲ್ಲೇ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಕೌಶಿಕ್ ಮತ್ತು ಹೇಮಂತ್ ಎಂಬ ಇಬ್ಬರು ಯುವಕರು ಬೈಕ್ ಸ್ಕಿಡ್ ಆಗಿ ರಸ್ತೆಗೆಸೆಯಲ್ಪಟ್ಟಿದ್ದರು.
ಮೊಹಿದೀನ್ ಬಾವ ಅವರು ತಕ್ಷಣ ಕಾರು ನಿಲ್ಲಿಸದಿರುತ್ತಿದ್ದರೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಬಸ್ ಇವರ ಮೇಲೆ ಹರಿಯುವ ಭಾರೀ ಅಪಾಯ ತಪ್ಪಿದೆ.
Spread the love
That’s call humanity