ಅಪರಿಚಿತ ಶವ ಪತ್ತೆ – ಮಾಹಿತಿ ಕೋರಿಕೆ

Spread the love

ಅಪರಿಚಿತ ಶವ ಪತ್ತೆ – ಮಾಹಿತಿ ಕೋರಿಕೆ

ಬೈಕಂಪಾಡಿ ಎಪಿಎಮ್ ಸಿಯಲ್ಲಿ ದಿನಾಂಕ: 27-09-2022 ರಂದು ಬೆಳಿಗ್ಗೆ ಸುಮಾರು 10-30 ಗಂಟೆಗೆ ಬೈಕಂಪಾಡಿ ಮಾರುಕಟ್ಟೆ ಪ್ರಾಂಗಣದ ಹರಾಜುಕಟ್ಟೆಯ ಬಳಿ ಕಂಬಕ್ಕೆ ನೈಲನ್ ಹಗ್ಗದಿಂದ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಒಬ್ಬಾತ ಅಪರಿಚಿತ ಸುಮಾರು 30 ರಿಂದ 35 ವರ್ಷ ಪ್ರಾಯದ ಗಂಡಸು ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದು, ಇತನ ಪರಿಚಯ ಇದ್ದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

ಪ್ರಾಯ ಸುಮಾರು 35 ವರ್ಷ

ಬಟ್ಟೆ ಬರೆ ಮತ್ತು ಇತರೆ ಸ್ವತ್ತುಗಳು: ನೀಲಿ ಬಣ್ಣದ ಬಿಳಿ ಚುಕ್ಕಿಗಳಿರುವ ತುಂಬು ತೋಲಿನ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಕೆಂಪು ಒಳಚಡ್ಡಿ, ಸಾಧಾರಣ ಶರೀರ

ಮೈ ಬಣ್ಣ: ಗೋಧಿ ಮೈಬಣ್ಣ,

ಚಹರೆ ಗುರುತು: ಕಪ್ಪು ತಲೆ ಕೂದಲು, ಮುಖದಲ್ಲಿ ಬಿಳಿ ಗಡ್ಡ ಕುರುಚಲು ಮೀಸೆ ಇರುತ್ತದೆ
ಈ ರೀತಿ ಚಹರೆಯುಳ್ಳ ಅಪರಿಚಿತ ಗಂಡಸಿನ ವಾರೀಸುದಾರರು ಯಾರೆಂದು ಈವರೆಗೆ ಪತ್ತೆಯಾಗಿರುವುದಿಲ್ಲ. ಮೃತನ ಬಗ್ಗೆ ಮಾಹಿತಿ ದೊರೆತು ಬಂದಲ್ಲಿ ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವರೇ ಕೋರಿಕೆ

ಸಂಪರ್ಕಿಸಬೇಕಾದ ವಿಳಾಸ:

ಪಣಂಬೂರು ಪೊಲೀಸ್ ಠಾಣೆ 0824-2220530

ಸಿಟಿ ಕಂಟ್ರೋಲ್ ರೂಮ್. 0824-2220800


Spread the love