
ಅಪೋಸ್ತಲಿಕ್ ಕಾರ್ಮೆಲ್ ನಿಂದ ಲಸಿಕಾ ಅಭಿಯಾನ
ಮಂಗಳೂರು 26: ಅಪೋಸ್ತಲಿಕ್ ಕಾರ್ಮೆಲ್ ಶಿಕ್ಷಣ ಸಂಸ್ಥೆ, ಮಂಗಳೂರು ಜೂನ್ ದಿನಾಂಕ 26, 2021ರಂದು ಕಾರ್ಮೆಲ್ ಶಾಲೆ (ಸಿಬಿಎಸ್ಇ)ನಲ್ಲಿ ಲಸಿಕಾ ಅಭಿಯಾನವನ್ನು ನಡೆಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ನಡೆದ ಲಸಿಕಾ ಅಭಿಯಾನವನ್ನು ಮಂಗಳೂರು ದಕ್ಷಿಣ ಶಾಸಕರಾದ ಶ್ರೀಯುತ ವೇದವ್ಯಾಸ್ ಕಾಮತ್ರವರು ಶಿಬಿರಕ್ಕೆ ಚಾಲನೆ ನೀಡಿದರು.


ಲಸಿಕಾ ಅಭಿಯಾನವನ್ನು ಉದ್ಗಾಟಿಸುತ್ತಾ ಜನಸಾಮಾನ್ಯರೆಲ್ಲರೂ ಘನಸರಕಾರ ಹಾಗೂ ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಿ ಕೊರೋನ ಮಹಾಮಾರಿಯನ್ನು ಸದೆಬಡಿಯುವಲ್ಲಿ ಸಹಕರಿಸಬೇಕೆಂದು ವಿನಂತಿಸಿದರು. ಕೋವಿಡ್ ಕಾರ್ಯಕರ್ತರ ಕೆಲಸವನ್ನು ಶ್ಲಾಘಿಸುತ್ತಾ ತಮ್ಮ ವಿಧಾನಸಭಾ ಕ್ಷೇತ್ರದ ಎಲ್ಲರೂ ಲಸಿಕೆಯನ್ನು ಪಡೆದು ಅಭಿವೃದ್ಧಿಯತ್ತ ಮುನ್ನುಗ್ಗಲು ಕರೆನೀಡಿದರು. ಮಂಗಳೂರು ಮಹಾನಗರ ಪಾಲಿಕೆಯ ಪೌರರಾದ ಶ್ರೀ ಪ್ರೇಮಾನಂದ ಶೆಟ್ಟಿ ಯವರು ಶಾಲೆಗೆ ಭೇಟಿ ನೀಡಿ ಲಸಿಕಾ ಅಭಿಯಾನಕ್ಕೆ ಪ್ರೋತ್ಸಾಹ ನೀಡಿದರು.


ವೈದ್ಯಾಧಿಕಾರಿ ಡಾಕ್ಟರ್ ವಿದ್ಯಾರವರು ವೇದಿಕೆಯಲ್ಲಿದ್ದರು. ಭಗಿನಿ ಶಮಿತಾ ಎ.ಸಿ, ಉಪಾಧ್ಯಕ್ಷರು ಅಪೋಸ್ತಲಿಕ್ ಕಾರ್ಮೆಲ್ ಶಿಕ್ಷಣ ಸಂಸ್ಥೆ, ಗಣ್ಯರನ್ನು ಸ್ವಾಗತಿಸಿದರು. ಸಂಸ್ಥೆಯ ಕಾರ್ಯದರ್ಶಿ ಭಗಿನಿ ಮರಿಯ ಶುಭಾ ಎಸಿ, ಭಗಿನಿ ಸಾರಿಕಾ ಎಸಿ, ಪ್ರಾಂಶುಪಾಲೆ, ಕಾರ್ಮೆಲ್ ಶಾಲೆ (ಸಿಬಿಎಸ್ಇ) ಉಪಸ್ಥಿತರಿದ್ದರು. ಶ್ರೀಯುತ ಫೆಡ್ರಿಕ್ ಪೌಲ್ರ ಸತತ ಪ್ರಯತ್ನದಿಂದ ಲಸಿಕಾ ಅಭಿಯಾನ ಯಶಸ್ವಿಯಾಗಿ ನಡೆಯಿತು. ಭಗಿನಿ ಡೋರತಿ ಡಿʼಸೋಜ ಎಸಿ ಕಾಯಕ್ರಮವನ್ನು ನಿರ್ವಹಿಸಿದರು.