ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ : ಪೋಕ್ಸೋ ಪ್ರಕರಣ ದಾಖಲು, ಬಂಧನ
ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸುರತ್ಕಲ್ ಪೊಲೀಸರು ವ್ಯಕ್ತಿಯೋರ್ವನನ್ನು ಬಂಧಿಸಿ, ಆತನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.
ಸುರತ್ಕಲ್ನ ಚೊಕ್ಕಬೆಟ್ಟು ಜುಮ್ಮಾ ಮಸೀದಿ ಬಳಿಯ ಹನಿ ಫ್ಯಾಶನ್ ಶಾಪ್ ಮತ್ತು ಜನರಲ್ ಸ್ಟೋರ್ ಮಾಲೀಕ ಮೊಹಮ್ಮದ್ ಇಸ್ಮಾಯಿಲ್ ಬಂಧಿತ ಆರೋಪಿ. ಶನಿವಾರ 6ನೇ ತರಗತಿಯ ಬಾಲಕನೊಬ್ಬ ಚಾಕೊಲೇಟ್ ಖರೀದಿಸಲು ಅಂಗಡಿಗೆ ಹೋಗಿದ್ದನು. ಆಗ ಆರೋಪಿಗಳು ಆತನನ್ನು ಅಂಗಡಿಯ ಕೋಣೆಯೊಳಗೆ ಕೂಡಿ ಹಾಕಿ, ಬಾಲಕನ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ, ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ನೊಂದ ಬಾಲಕನ ತಾಯಿ ನೀಡಿದ ದೂರಿನ ಆಧಾರದ ಮೇಲೆ, ಪೋಕ್ಸೋ ಕಾಯ್ದೆಯಡಿ ಬಿಎನ್ಎಸ್ನ ಸೆಕ್ಷನ್ 351(2) ಮತ್ತು 127(2) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕ್ಷಿಪ್ರವಾಗಿ ಕಾರ್ಯನಿರ್ವಹಿಸಿದ ಸುರತ್ಕಲ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಪ್ರಮೋದ್ ಕುಮಾರ್ ಮತ್ತು ಅವರ ತಂಡ ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿತು. ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.
