ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕಳ – ಪ್ರಕರಣ ದಾಖಲು

Spread the love

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕಳ – ಪ್ರಕರಣ ದಾಖಲು

ಮಂಗಳೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕಳ ನೀಡಿದ ಕಾನೂನು ಸಂಘರ್ಷಕ್ಕೊಳಗಾದ ಬಾಲಕನ ವಿರುದ್ದ ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

ನೊಂದ ಬಾಲಕಿಯು ಖಾಸಗಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವಿಧ್ಯಾಭ್ಯಾಸ ಮಾಡಿಕೊಂಡಿದ್ದು,16 ವರ್ಷದವಳಾ ಗಿದ್ದು ಸುಮಾರು ಒಂದು ವರ್ಷಗಳ ಹಿಂದೆ ಇನ್‌ ಸ್ಟಾಗ್ರಾಂ ಮೂಲಕ ಕಾನೂನು ಸಂಘರ್ಷಕ್ಕೊಳಗಾದ (17 ವರ್ಷದ) ಬಾಲಕನ ಪರಿಚಯವಾಗಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಕಾನೂನು ಸಂಘರ್ಷಕ್ಕೊಳಗಾದ ಬಾಲಕನು ಮೊಬೈಲ್ ನಲ್ಲಿ ಮೇಸೇಜ್ ಮಾಡುತ್ತಿದ್ದವನು ದಿನಾಲೂ ದೂರುದಾರರ ಮನೆಗೆ ಬರುವುದಾಗಿ ತಿಳಿಸುತ್ತಿದ್ದ ಎನ್ನಲಾಗಿದೆ

ದಿನಾಂಕ: 13.08.2022 ರಂದು ರಾತ್ರಿ ಬಾಲಕಿ ಮನೆಯಲ್ಲಿದ್ದ ಸಮಯ ಕಾನೂನು ಸಂಘರ್ಷಕ್ಕೊಳಗಾದ ಬಾಲಕನು ನಾನು ಮನೆಗೆ ಬರುತ್ತಿದ್ದೇನೆ ನೀನು ಬಾಗಿಲು ತೆಗೆಯಬೇಕು ತೆಗೆಯದಿದ್ದರೆ ಮನೆಯವರ ಮುಂದೆ ಗಲಾಟೆ ಮಾಡುತ್ತೇನೆಂದು ಹೆದರಿಸಿದ್ದು, ರಾತ್ರಿ ಎಲ್ಲರೂ ಮಲಗಿದ ನಂತರ ಸಮಯ ಸುಮಾರು ರಾತ್ರಿ 12.00 ಗಂಟೆಯ ಹೊತ್ತಿಗೆ ಪಿರ್ಯಾದಿದಾರರ ಮನೆಯ ಬಳಿ ಬಂದು ನಿಮ್ಮ ಮನೆಯ ಬಳಿ ಬಂದಿರುತ್ತೇನೆಂದು ಮೇಸೇಜ್ ಮಾಡಿದ್ದು, ಬಾಲಕಿ ಹೆದರಿ ಮನೆಯಲ್ಲಿ ಎಲ್ಲರೂ ಮಲಗಿರುವುದನ್ನು ಖಚಿತ ಪಡಿಸಿಕೊಂಡು ಮನೆಯ ಎದುರಿನ ಬಾಗಿಲಿನ ಚಿಲಕವನ್ನು ತೆಗೆದಿದ್ದು ಈ ವೇಳೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು, ಈ ವಿಚಾರವನ್ನು ಯಾರಲ್ಲಿಯೂ ಹೇಳಿದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲವೆಂದು ಬೆದರಿಕೆ ಹಾಕಿರುವುದಾಗಿ ಬಾಲಕಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಾನೂನು ಸಂಘರ್ಷಕ್ಕೊಳಗಾದ ಬಾಲಕನ ಪತ್ತೆ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.


Spread the love

Leave a Reply

Please enter your comment!
Please enter your name here