Home Mangalorean News Kannada News ಅಪ್ರಾಪ್ತ ಬಾಲಕಿಯರಿಗೆ ಆಟೋ ಚಾಲಕನಿಂದ ಕಿರುಕುಳ – ಪ್ರಕರಣ ದಾಖಲು

ಅಪ್ರಾಪ್ತ ಬಾಲಕಿಯರಿಗೆ ಆಟೋ ಚಾಲಕನಿಂದ ಕಿರುಕುಳ – ಪ್ರಕರಣ ದಾಖಲು

Spread the love

ಅಪ್ರಾಪ್ತ ಬಾಲಕಿಯರಿಗೆ ಆಟೋ ಚಾಲಕನಿಂದ ಕಿರುಕುಳ – ಪ್ರಕರಣ ದಾಖಲು

ಮಂಗಳೂರು: ಶಾಲೆಗೆ ತೆರಳುತ್ತಿದ್ದ ಅಪ್ರಾಪ್ತ ಪ್ರಾಯದ ಇಬ್ಬರು ಬಾಲಕಿಯರಿಗೆ ಆಟೋ ರಿಕ್ಷಾ ಚಾಲಕ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ.

ಪೊಲೀಸ್ ಮೂಲಗಳ ಪ್ರಕಾರ, ಪ್ರಕರಣದ ಪಿರ್ಯಾದಿದಾರರ ಅಪ್ರಾಪ್ತ ಪ್ರಾಯದ ಮಗಳು ಹಾಗೂ ಮತ್ತೊಬ್ಬ ವಿದ್ಯಾರ್ಥಿನಿ ಸ್ಥಳೀಯ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಅವರು ಶಾಲೆಗೆ ತೆರಳುತ್ತಿದ್ದಾಗ, ಒಬ್ಬ ಅಪರಿಚಿತ ವ್ಯಕ್ತಿ ಆಟೋ ರಿಕ್ಷಾದಲ್ಲಿ ಹಿಂಬಾಲಿಸಿ ಕಿರುಕುಳ ನೀಡಿದ್ದಾನೆ.

ಈ ಕಿರುಕುಳ ಮುಂದುವರಿದಿದ್ದು, 08-10-2025 ರಂದು ಬೆಳಿಗ್ಗೆ, ಅದೇ ವ್ಯಕ್ತಿ ಮತ್ತೆ ಆಟೋ ರಿಕ್ಷಾದಲ್ಲಿ ಬಂದು ಇಬ್ಬರು ಬಾಲಕಿಯರಿಗೆ ಕಿರುಕುಳ ನೀಡಿದ್ದಾನೆ. ನಂತರ ತನಿಖೆಯ ವೇಳೆ ಆ ವ್ಯಕ್ತಿಯು ಪ್ರಸಾದ್ ಎಂದು ತಿಳಿದುಬಂದಿದೆ.

ಈ ಸಂಬಂಧ ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 83/2025, ಕಲಂ 78(2) BNS 2023 ಮತ್ತು ಸೆಕ್ಷನ್ 12 POCSO Act 2012 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


Spread the love

Exit mobile version