
ಅಮಾಸೆಬೈಲು: ಟಾಟಾ ಸುಮೋದಲ್ಲಿ ಅಕ್ರಮ ಜಾನುವಾರು ಸಾಗಾಟ, ನಾಲ್ಕು ಗೋವುಗಳ ರಕ್ಷಣೆ
ಕುಂದಾಪುರ: ಮಾಂಸಕ್ಕಾಗಿ ಜಾನುವಾರುಗಳನ್ನು ಟಾಟಾ ಸುಮೊದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದು ನಾಲ್ಕು ಗೋವುಗಳನ್ನು ಬುಧವಾರ ಅಮಾಸೆಬೈಲು ಪೊಲೀಸರು ರಕ್ಷಣೆ ಮಾಡಿದ್ದಾರೆ.
ಅಮಾಸೆಬೈಲು ಠಾಣಾಧಿಕಾರಿ ಅನಿಲ್ ಕುಮಾರ್ ಅವರು ಬುಧವಾರ ಮುಂಜಾನೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ರಟ್ಟಾಡಿ ರಟ್ಟೇಶ್ವರ ದೇವಸ್ಥಾನದ ಬಳಿ ರಟ್ಟಾಡಿ ಕಡೆಯಿಂದ ಅಮಾಸೆಬೈಲು ಕಡೆಗೆ ಬರುತ್ತಿದ್ದ ಟಾಟಾ ಸುಮೋ ಮತ್ತು ಮೋಟಾರ್ ಸೈಕಲನ್ನು ನಿಲ್ಲಿಸಲು ಸೂಚನೆ ನೀಡಿದ್ದು, ವಾಹನವನ್ನು ನಿಲ್ಲಿಸಿ ಅದರಲ್ಲಿದ್ದ ಮೂರು ಮಂದಿ ಓಡಿ ಹೋಗಿದ್ದು, ವಾಹನ ತಪಾಡಣೆ ಮಾಡಿದಾರ ರಸ್ತೆಗಳಲ್ಲಿ ತಿರುಗಾಡುವ ಮೂರು ಗಂಡು ಹೋರಿ ಮತ್ತು ಒಂದು ಹೆಣ್ಣು ದನವನ್ನು ಕಳವು ಮಾಡಿಕೊಂಡು ಹಿಂಸಾತ್ಮಕವಾಗಿ ಕಟ್ಟಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ. ಕಳವು ಮಾಡಿದ ದನಗಳ ಭಟ್ಕಳಕ್ಕೆ ಮಾಂಸಕ್ಕಾಗಿ ಕೊಂಡು ಹೋಗುತ್ತಿರುವುದಾಗಿ ತಿಳಿದು ಬಂದಿದ್ದು ಓಡಿ ಹೋದವರನ್ನು ಅನ್ನಾನ್ ಮತ್ತು ಸುಫಿಯಾನ್ ಹಾಗೂ ಮಹಮದ್ ಹುಸೇನ್ ಎಂದು ಗುರುತಿಸಲಾಗಿದೆ.
ಪೊಲೀಸರು ನಾಲ್ಕು ಜಾನುವಾರುಗಳು ಮತ್ತು ಒಂದು ಟಾಟಾ ಸುಮೊ ವಾಹನ ಮತ್ತು ಮೋಟಾರು ಸೈಕಲನ್ನು ವಶಕ್ಕೆ ಪಡೆದಿದ್ದಾರೆ.
ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.