Home Mangalorean News Kannada News ಅರಂತೋಡಿನ ಕೃಷಿತೋಟದಲ್ಲಿ ಮರಿ ಆನೆ ಸಾವು; ಆನೆಯ ದಂತದ ಇರಿತಕ್ಕೆ ಬಲಿಯಾದ ಶಂಕೆ!

ಅರಂತೋಡಿನ ಕೃಷಿತೋಟದಲ್ಲಿ ಮರಿ ಆನೆ ಸಾವು; ಆನೆಯ ದಂತದ ಇರಿತಕ್ಕೆ ಬಲಿಯಾದ ಶಂಕೆ!

Spread the love

ಅರಂತೋಡಿನ ಕೃಷಿತೋಟದಲ್ಲಿ ಮರಿ ಆನೆ ಸಾವು; ಆನೆಯ ದಂತದ ಇರಿತಕ್ಕೆ ಬಲಿಯಾದ ಶಂಕೆ!

ಸುಳ್ಯ: ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ಅರಂತೋಡಿನ ಅಡ್ತಲೆ ಎಂಬಲ್ಲಿ ಕೃಷಿತೋಟವೊಂದರಲ್ಲಿ ಮರಿ ಆನೆಯೊಂದರ ಮೃತದೇಹ ಪತ್ತೆಯಾಗಿದೆ. ಸ್ಥಳೀಯರೊಬ್ಬರಿಗೆ ಸೇರಿದ ಅಡಿಕೆ ತೋಟದಲ್ಲಿ ಆನೆ ಮರಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಹಿನ್ನಲೆಯಲ್ಲಿ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಅಧಿಕಾರಿಗಳು ಸುಳ್ಯ ಎಸಿಎಫ್ ಪ್ರಶಾಂತ್ ಪೈ ಸೂಚನೆಯಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಳ್ಯ ವಲಯ ಅರಣ್ಯಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ತಂಡ ಆನೆಯ ಶವಪರೀಕ್ಷೆಗೆ ವ್ಯವಸ್ಥೆಯನ್ನು ಮಾಡಿದ್ದು, ಗಂಡು ಆನೆಯೊಂದು ಈ ಮರಿ ಆನೆಗೆ ತನ್ನ ದಂತದಿಂದ ತಿವಿದ ಹಿನ್ನಲೆಯಲ್ಲಿ ಮರಿ ಆನೆ ಸಾವನ್ನಪ್ಪಿರುವ ಸಾಧ್ಯತೆಯಿದೆ‌ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.

ಸಾವನ್ನಪ್ಪಿದ ಮರಿ ಆನೆ ಹೆಣ್ಣಾಗಿದ್ದು, ಸಾವಿನ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ಬಳಿಕ ತಿಳಿದು ಬರಲಿದೆ.


Spread the love

Exit mobile version