ಅರಣ್ಯ ಕಾನೂನು ಸರಳೀಕರಣಕ್ಕೆ ಕಾನೂನು ತಿದ್ದುಪಡಿ – ಸಚಿವೆ ಶೋಭಾ ಕರಂದ್ಲಾಜೆ

Spread the love

ಅರಣ್ಯ ಕಾನೂನು ಸರಳೀಕರಣಕ್ಕೆ ಕಾನೂನು ತಿದ್ದುಪಡಿ – ಸಚಿವೆ ಶೋಭಾ ಕರಂದ್ಲಾಜೆ

ಚಾಮರಾಜನಗರ: ಕರ್ನಾಟಕದಲ್ಲಿ ಅರಣ್ಯ ಇಲಾಖೆಯ ಕಾನೂನು ಕಠಿಣವಾಗಿದ್ದು ಅದನ್ನು ಸರಳೀಕರಣಗೊಳಿಸುವ ಕುರಿತಂತೆ ಒತ್ತಡಗಳು ಬಂದಿರುವುದರಿಂದ ಮುಂದಿನ ದಿನಗಳಲ್ಲಿ ಪ್ರಧಾನ ಮಂತ್ರಿಗಳು ಅರಣ್ಯ ಇಲಾಖೆಯ ಕಾನೂನಿಗೆ ತಿದ್ದುಪಡಿ ತಂದಿದ್ದಾರೆ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿದ್ದ ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಹೋಲಿಸಿದರೆ ಕರ್ನಾಟದಲ್ಲಿ ಮಾತ್ರ ಅರಣ್ಯ ಇಲಾಖೆಯ ಕಠಿಣ ಕಾನೂನು ಜಾರಿಯಲ್ಲಿದೆ. ತನ್ನ ಜಮೀನಿನಲ್ಲಿ ಬೆಳೆದ ಮರವನ್ನು ಕಡಿಲು ರೈತರ ಅರಣ್ಯ ಇಲಾಖೆ ಅನುಮತಿ ಪಡೆಯಬೇಕು. ಈ ಕಠಿಣ ನೀತಿಯನ್ನು ಕೇಂದ್ರ ಸರ್ಕಾರ ಬದಲಾಯಿಸಲು ಕಾನೂನಿನಲ್ಲಿ ತಿದ್ದುಪಡಿ ತಂದಿದೆ ಎಂದು ತಿಳಿಸಿದರು.

ಅರಣ್ಯ ಸಂಪತ್ತು ಕೂಡಿರುವ ಅಂತರಾಜ್ಯ ಗಡಿ ಜಿಲ್ಲೆಗಳ ರೈತರಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿರವರು ಅರಣ್ಯ ಇಲಾಖೆ ಕಾನೂನುನಿಲ್ಲಿ ಸಡಿಲಿಕೆ ತಂದಿದ್ದಾರೆ. ಲಾಭದಾಯಕವಾಗಿರುವ ಶ್ರೀಗಂಧದ ಮರ ಕಡಿಲು ಮತ್ತು ಸಾಗಾಣಿಕೆ ಮಾಡಲು ಪ್ರೋತ್ಸಾಹಿಸುವುದು ಕೇಂದ್ರ ಸರ್ಕಾರದ ಉದ್ದೇಶ. ಹೈದರಾಬಾದ್‌ನ ಕೃಷಿ ಸಂಶೋಧನಾ ಸಂಸ್ಥೆ ಅಧ್ಯಯನದ ಪ್ರಕಾರ ರೈತ ಕೃಷಿಯ ಜತೆಗೆ ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ, ಹೈನುಗಾರಿಕೆ, ಮೀನುಗಾರಿಕೆ, ಮಿಶ್ರ ಬೇಸಾಯ ಮಾಡುತ್ತಿರುವ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಕಡಿಮೆ. ಹೀಗಾಗಿ ರೈತರಿಗೆ ವ್ಯವಸಾಯದ ಜತೆಗೆ ಉಪ ಕಸುಬಿನಲ್ಲಿ ತೊಡಗಲು ಪ್ರೇರೇಪಿಸಲಾಗುತ್ತಿದೆ ಎಂದರು.


Spread the love