
ಅರೆಶಿರೂರು ಹೆಲಿಪ್ಯಾಡ್ ಬಳಿ ಡಿಕೆಶಿ ಆಪ್ತ ಯುಬಿ ಶೆಟ್ಟಿ ಹಣ ಜಪ್ತಿ
ಕುಂದಾಪುರ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಲ್ಲಿನ ಅರೆಶೀರೂರು ಹೆಲಿಪ್ಯಾಡ್ ಗೆ ಆಗಮಿಸಿದ ವೇಳೆ ಡಿಕೆಶಿ ಆಪ್ತ ಯುಬಿ ಶೆಟ್ಟಿಯವರ ಬ್ಯಾಗ್ ನೊಳಗಿದ್ದ ಹಣವನ್ನು ತಪಾಸಣೆ ತಂಡ ಜಪ್ತಿ ಮಾಡಿದೆ.
ಬೈಂದೂರಿನ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಕ್ಕಾಗಿ ಹೆಲಿಕಾಫ್ಟರ್ನಲ್ಲಿ ಅರೆಶಿರೂರು ಹೆಲಿಪ್ಯಾಡ್ ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಂದಿಳೀದ ವೇಳೆ ಈ ಘಟನೆ ನಡೆದಿದೆ. ಡಿಕೆಶಿ ಅವರನ್ನು ಸ್ವಾಗತಿಸಲು ಬಂದಿದ್ದ ಆಪ್ತ ಯುಬಿ ಶೆಟ್ಟಿಯವರ ಕಾರು ಪರಿಶೀಲಿಸುವ ವೇಳೆ ಬ್ಯಾಗ್ ನಲ್ಲಿ 50 ಸಾವಿರ ರೂಪಾಯಿ ಪತ್ತೆಯಾಗಿದೆ.
ಸದ್ಯ ನಗದು ಹಣವನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಮುಂದಿನ ತನಿಖೆಗಾಗಿ ಸ್ಕ್ರೀನಿಂಗ್ ಕಮಿಟಿಗೆ ನಗದನ್ನು ಹಸ್ತಾಂತರಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಆ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಬೈಂದೂರಿನ ಚುನಾವಣಾಧಿಕಾರಿ ಜಗದೀಶ್ ಗಂಗಣ್ಣನವರ್ ತಿಳಿಸಿದ್ದಾರೆ. ನೀತಿ ಸಂಹಿತೆ ಪ್ರಕಾರ ದಾಖಲೆಯಿಲ್ಲದೆ 50 ಸಾವಿರ ರೂ. ಕೊಂಡೊಯ್ಯಬಹುದಾಗಿದ್ದರೂ, ಇದನ್ನು ಯಾಕೆ ಜಪ್ತಿ ಮಾಡಲಾಗಿದೆ ಎನ್ನುವುದು ತಿಳಿದು ಬಂದಿಲ್ಲ.