ಅರ್ಕಾವತಿ ನದಿಗೆ ತಾತ್ಕಾಲಿಕ ಸೇತುವೆ

Spread the love

ಅರ್ಕಾವತಿ ನದಿಗೆ ತಾತ್ಕಾಲಿಕ ಸೇತುವೆ

ರಾಮನಗರ: ತಾಲ್ಲೂಕಿನ ಸುಗ್ಗನಹಳ್ಳಿ ಗ್ರಾಮದಲ್ಲಿ ಅರ್ಕಾವತಿ ನದಿಗೆ ತಾತ್ಕಾಲಿಕ ಸೇತುವೆ ನಿರ್ಮಾಣ ಕಾಮಗಾರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸೋಮವಾರ ತಮ್ಮ ಪತ್ನಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಅವರು, ದೇವೇಗೌಡರು ಲೋಕೋಪಯೋಗಿ ಸಚಿವರಾಗಿದ್ದಾಗ ಅರ್ಕಾವತಿ ನದಿಗೆ ಈ ಸೇತುವೆ ನಿರ್ಮಾಣವಾಗಿತ್ತು. ಇಲ್ಲಿ ಅಕ್ರಮ ಮರಳುಗಾರಿಕೆ ಮಾಡಿದ ಕಾರಣದಿಂದಾಗಿ ಸೇತುವೆ ಶಿಥಿಲವಾಗಿ ನದಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಬಂದು ಕುಸಿದಿದೆ. ನಮ್ಮ ಸರಕಾರ ಇದ್ದಿದ್ದರೇ ತಕ್ಷಣವೇ ಹೊಸ ಸೇತುವೆ ನಿರ್ಮಾಣ ಆಗುತ್ತಿತ್ತು. ಇದೀಗ ತಾತ್ಕಾಲಿಕ ಸೇತುವೆ ನಿರ್ಮಾಣಕ್ಕೆ ಮಾತ್ರ ಅನುದಾನ ಪಡೆಯಲಾಗಿದೆ. ಮುಂದೆ ನಮ್ಮ ಸರ್ಕಾರದಲ್ಲಿ ಸುಸಜ್ಜಿತ ಸೇತುವೆ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಇನ್ನೆರಡು ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಜೆಡಿಎಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಉತ್ತರ ಕರ್ನಾಟಕದಲ್ಲೂ ಜೆಡಿಎಸ್ ಪPಕ್ಕೆ ಜನಬೆಂಬಲ ದೊರೆತಿದೆ. ಈ ಬಾರಿ ಹಿಂದೆಂದೂ ಕೇಳದಂತಹ ಜನಸ್ಪಂದನೆ ಜೆಡಿಎಸ್ ಪPಕ್ಕೆ ಲಭಿಸಿದ್ದು, ಪಂಚರತ್ನ ರಥಯಾತ್ರೆ ವೇಳೆ ಜನಸ್ತೋಮವೇ ಹರಿದುಬಂದಿದೆ ಎಂದರು.

ರಾಮನಗರ ಕ್ಷೇತ್ರದಲ್ಲಿ ನನ್ನನ್ನು ಮುಗಿಸಲು ಹೊರಟಿದ್ದಾರೆ. ನನ್ನ ಮುಗಿಸಿದರೆ ಜೆಡಿಎಸ್ ಪP ಮುಗಿಸಿದಂತೆ ಎಂದು ನನ್ನ ವಿರುದ್ಧ ಷಡ್ಯಂತ್ರ ರಚಿಸಿzರೆ. ತವಾ, ಕುಕ್ಕರ್ ಹಂಚುವವರ ಷಡ್ಯಂತ್ರಕ್ಕೆ ಜನರು ಮರುಳಾಗಬಾರದು ಎಂದ ಅವರು ಈ ಬಾರಿ ರಾಮನಗರ ಕ್ಷೇತ್ರದಲ್ಲಿ ಹಣದ ಹೊಳೆಯೇ ಹರಿಯಲಿದೆ. ರಾಮನಗರ ಕ್ಷೇತ್ರವನ್ನು ಬಿಟ್ಟು ಹೋಗಲು ಮನಸ್ಸಿರಲಿಲ್ಲ. ಆದರೆ ಚನ್ನಪಟ್ಟಣದ ಕಾರ್ಯಕರ್ತರನ್ನು ಉಳಿಸಿಕೊಳ್ಳಲು ಹೋಗಬೇಕಾಯಿತು. ಆದರೂ ನಾನು ಮಣ್ಣಾಗುವುದು ರಾಮನಗರ ಮಣ್ಣಿನಲ್ಲಿಯೇ. ಚನ್ನಪಟ್ಟಣ ಕ್ಷೇತ್ರಕ್ಕೆ ಹೋಗಿದ್ದರು ಸಹ ನನ್ನ ಮನಸ್ಸು ಇಲ್ಲಿಯೇ ಇದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ಪ್ರಧಾನ ಕಾರ್ಯದರ್ಶಿ ಬಿ.ಉಮೇಶ್, ಜೆಡಿಎಸ್ ಮುಖಂಡರಾದ ರಾಮಕೃಷ್ಣಯ್ಯ, ಶಿವರಾಮೇಗೌಡ, ಮಹದೇವ ಲಕ್ಕಸಂದ್ರ ಸೇರಿದಂತೆ ಮುಂತಾದವರು ಹಾಜರಿದ್ದರು.


Spread the love

Leave a Reply

Please enter your comment!
Please enter your name here