ಅಲೆವೂರು: ಗುಂಡಿ ಮುಚ್ಚಲು ನೆಹರೂ ಸ್ಪೋರ್ಟ್ಸ್‌ ನಿಂದ ಶ್ರಮದಾನ, ಕಾಂಕ್ರೀಟ್

Spread the love

ಅಲೆವೂರು: ಗುಂಡಿ ಮುಚ್ಚಲು ನೆಹರೂ ಸ್ಪೋರ್ಟ್ಸ್‌ ನಿಂದ ಶ್ರಮದಾನ, ಕಾಂಕ್ರೀಟ್

ಉಡುಪಿ: ಹೊಂಡ ಗುಂಡಿಗಳಿಂದ ತುಂಬಿದ್ದ, ಮಣಿಪಾಲ ಅಲೆವೂರು ರಸ್ತೆಯ ಗುಡ್ಡೆಯಂಗಡಿ ಜಂಕ್ಷನ್ ಬಳಿ ನೆಹರೂ ಸ್ಪೋರ್ಟ್ಸ್ & ಕಲ್ಚರಲ್ ಅಸೋಸಿಯೇಷನ್ ಸದಸ್ಯರು ಶ್ರಮದಾನ ಮಾಡಿ ಕಾಂಕ್ರೀಟ್ ಹಾಕಿದ್ದಾರೆ. ಆ ಮೂಲಕ ದ್ವಿಚಕ್ರ ಸವಾರರ ಸುಗಮ ಸಂಚಾರಕ್ಕೆ ಸಂಕಷ್ಟ ತಂದೊಡ್ಡಿದ್ದ ರಸ್ತೆ ಹೊಂಡಕ್ಕೆ ಮುಕ್ತಿ ದೊರಕಿಸಿದ್ದಾರೆ.

ನೆಹರೂ ಸ್ಪೋರ್ಟ್ಸ್‌ನ ಸದಸ್ಯ, ಸಿವಿಲ್ ಗುತ್ತಿಗೆದಾರ ಶರಣ್ ಉಪ್ಪಾರ್ ಅವರ ಉಸ್ತುವಾರಿಯಲ್ಲಿ ಸಿಮೆಂಟ್, ಜಲ್ಲಿ, ಹೊಯ್ಗೆ, ನೀರು ಹೊಂದಿಸಿಕೊಂಡು ಸುಮಾರು 25 ಜನ ಸದಸ್ಯರು ಈ ರಸ್ತೆ ದುರಸ್ಥಿ ಕಾರ್ಯ ನಡೆಸಿದರು. ವಾಹನ ಸಂಚಾರ ವಿರಳವಿರುವ ಭಾನುವಾರ ತಡರಾತ್ರಿವರೆಗೂ ಶ್ರಮದಾನ ಮಾಡಿ, ವಾಹನಗಳು ಅದರ ಮೇಲೆ ಸಂಚರಿಸದಂತೆ ಟ್ರಾಫಿಕ್ ಕೋನ್‌ಗಳನ್ನು ಅಡ್ಡ ಇಟ್ಟು ಬಹಳ ವ್ಯವಸ್ಥಿತವಾಗಿ ಈ ರಸ್ತೆ ದುರಸ್ತಿ ನಡೆದಿದೆ. ಪಂಚಾಯತಿಯವರು ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡದಿದ್ದರೂ ನೆಹರೂ ಸ್ಪೋರ್ಟ್ಸ್ ‌ನವರು ಕಾಳಜಿ ವಹಿಸಿ ಜನಪರ ಕಾರ್ಯ ಮಾಡಿರುವುದಕ್ಕೆ ಸರ್ವತ್ರ ಮೆಚ್ಚುಗೆ ವ್ಯಕ್ತವಾಗಿದೆ.

ಗೌರವಾಧ್ಯಕ್ಷ ಹರೀಶ್ ಕಿಣಿ ಅವರ ನೇತೃತ್ವದಲ್ಲಿ ಅಧ್ಯಕ್ಷ ಜಯಕರ್ ಪೂಜಾರಿ, ಕಾರ್ಯದರ್ಶಿ ಗುರುರಾಜ್ ಸಾಮಗ, ಸತೀಶ್ ಪೂಜಾರಿ, ಮುರಳೀಧರ ಭಟ್, ಶೇಖರ ಪೂಜಾರಿ, ಸುರೇಶ್ ನಾಯ್ಕ್, ಪ್ರಕಾಶ್ ಪೂಜಾರಿ, ಅರುಣ್ ಕೊಪ್ಪ, ಸುನಿಲ್ ಶೇರಿಗಾರ್, ನಿತ್ಯಾನಂದ ಅಂಚನ್, ಪ್ರತಾಪ್ ಕುಂದರ್, ಶ್ರೀಧರ ಪೂಜಾರಿ, ಸುರೇಶ್ ಅಂಚನ್, ಸದಾನಂದ ಅಂಚನ್, ಶಬರೀಶ್ ಸುವರ್ಣ, ರಮಾನಂದ ನಾಯಕ್, ರವಿಕಿರಣ್, ಸತೀಶ್ ಕುಮಾರ್ ಮತ್ತಿತರರು ಶ್ರಮದಾನದಲ್ಲಿ ಪಾಲ್ಗೊಂಡರು.


Spread the love