ಅಳದಂಗಡಿ ಬಸದಿಗೆ ಭವ್ಯ ಮೆರವಣಿಗೆಯಲ್ಲಿ ದೇವರ ಮೂರ್ತಿಗಳು

Spread the love

ಅಳದಂಗಡಿ ಬಸದಿಗೆ ಭವ್ಯ ಮೆರವಣಿಗೆಯಲ್ಲಿ ದೇವರ ಮೂರ್ತಿಗಳು

ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ಅಳದಂಗಡಿಯಲ್ಲಿ ಅರಮನೆ ಪಕ್ಕದಲ್ಲಿರುವ ಭಗವಾನ್ ಆದಿನಾಥ ಸ್ವಾಮಿ ಬಸದಿಯನ್ನು ನವೀಕರಣಗೊಳಿಸಿದ್ದು ಭಗವಾನ್ ಆದಿನಾಥ ಸ್ವಾಮಿ ಮತ್ತು ಪದ್ಮಾವತಿ ದೇವಿಯ ನೂತನ ಮೂರ್ತಿಗಳನ್ನು ಗುರುವಾರ ಕುತ್ಲೂರಿನಿಂದ ಅಳದಂಗಡಿ ಬಸದಿ ವರೆಗೆ ಭವ್ಯ ಮೆರವಣಿಗೆಯಲ್ಲಿ ತರಲಾಯಿತು.

ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಬಸದಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಊರಿನ ಹಾಗೂ ನೆರೆಕರೆಯ ಗ್ರಾಮಗಳ ಶಾಸಕರು, ಶ್ರಾವಕಿಯರು ಭಾಗವಹಿಸಿದರು.

2021 ರ ಮೇ 31 ರಿಂದ ಜೂನ್ 4 ರ ವರೆಗೆ ಬಸದಿಯಲ್ಲಿ ಪಂಚಕಲ್ಯಾಣ ಮಹೋತ್ಸವ ಹಾಗೂ ನೂತನ ಬಿಂಬಗಳ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ.

ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಪ್ರಸಾದ್ ಅಜಿಲ, ಎ. ಮಿತ್ರಸೇನ ಜೈನ್ ಮೊದಲಾದವರು ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here