Home Mangalorean News Kannada News ಅಶಕ್ತರು, ಅನಾಥರಲ್ಲಿ ನಗುಮುಖ ಕಾಣುವುದೇ ಕ್ರಿಸ್ಮಸ್ ಆಚರಣೆ

ಅಶಕ್ತರು, ಅನಾಥರಲ್ಲಿ ನಗುಮುಖ ಕಾಣುವುದೇ ಕ್ರಿಸ್ಮಸ್ ಆಚರಣೆ

Spread the love

ಅಶಕ್ತರು, ಅನಾಥರಲ್ಲಿ ನಗುಮುಖ ಕಾಣುವುದೇ ಕ್ರಿಸ್ಮಸ್ ಆಚರಣೆ

ಸಂತ ಕ್ರಿಸ್ತೋಪರ್ ಎಸೋಷಿಯೇಶನ್ ಮಂಗಳೂರು ಇದರ ವತಿಯಿಂದ ಕ್ರಿಸ್‍ಮಸ್ ಹಬ್ಬ್ದ ಆಚರಣೆಯನ್ನು ಉಳ್ಳಾಲ ಬೀರಿಯಲ್ಲಿರುವ ಪಶ್ಚಿಮ್ ರಿüೀಹಾಬ್ ಆಶ್ರಮದಲ್ಲಿ ತಾರೀಕು: 21.12.2018ರಂದು ಆಚರಿಸಲಾಯಿತು.

ಆಶ್ರಮದ ನಿವಾಸಿಗಳಿಗೆ ಅಗತ್ಯವಿರುವ ವಸ್ತುಗಳನ್ನು ಹಾಗೂ ಕ್ರಿಸ್ಮಸ್ ಹಬ್ಬದ ಕುಸ್ವರನ್ನು ವಿತರಿಸಿ ಗೌರವ ಅಧ್ಯಕ್ಷರಾದ  ಸುಶೀಲ್ ನೊರೊನ್ಹರವರು ಮಾತನಾಡಿ “ದೇವರು ಮನುಷ್ಯ ರೂಪದಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದರು.  ಅವರ ಜನನ ಅಸಾÀಮಾನ್ಯ.  ಅವರು ಹುಟ್ಟಿ ಬೆಳೆÀದ ರೀತಿ ಅವರ ನಡೆ ನುಡಿ,  ವ್ಯಕ್ತಿತ್ವ ಯುಗಾ ಯುಗಾಂತರಕ್ಕೂ ಪ್ರೇರಣೆಯಾಗಿದೆ.  ಅವರ ಸಂಪೂರ್ಣ ಜೀವನÀ ಬಡ ಬಗ್ಗರ, ದೀನ ದಲಿತರ, ಶೋಷಿತ ವರ್ಗದ ಜನರಿಗೋಸ್ಮರ ಅವರ ಬಾಳನ್ನು ಅರ್ಥಪೂರ್ಣಗೊಳಿಸಿದರು.

ಈ ಆದರ್ಶವನ್ನು ಪಾಲಿಸುವುದು ನಮ್ಮ್ಮ ಧರ್ಮ.  ಈ ನಿಟ್ಟಿನಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಅಶಕ್ತರು, ಅನಾಥರು, ಶೋಷಿತ ವರ್ಗದವರನ್ನು ಭೇಟಿ ಮಾಡಿ ಅವರ ಮುಖದಲ್ಲಿ ನಗುವನ್ನು ಕಾಣುವುದೇ ಕ್ರಿಸ್ಮಸ್ ಹಬ್ಬದ ನಿಜವಾದ ಅರ್ಥ.  ಕಷ್ಟ ದು:ಖಗಳು ಜೀವನzಲ್ಲಿ ಸಹಜ.  ಅದನ್ನು ಸಹಿಸಿಕೊಂಡು ದೇವರನ್ನು ಹರಸುವುದು ಮತ್ತು ಕೃತಜತೆಯನ್ನು ಸಲ್ಲಿಸುವುದು ದೇವರಿಗೆ ಕೊಡುವ ಕೊಡುಗೆಯಾಗಿದೆ.  ಅದುದರಿಂದ ನಾವೆಲ್ಲರೂ ಕ್ರಿಸ್ಮಸ್ ಹಬ್ಬದಲ್ಲಿ ಜೊತೆಗೂಡಿ ಸಂತೊಷದಿಂದ ಈ ಹಬ್ಬವನ್ನು ಅಚರಿಸುವ ಎಂದು ಹೇಳಿದರು.  ಅಖಿಲ ಭಾರತ ಕಥೊಲಿಕ್ ಯುನಿಯನ್ ಅದ್ಯಕ್ಷರಾದ ಲ್ಯಾನ್ಸಿ ಡಿಕುನ್ಹಾರವರು ಎಸೋಷಿಯೇಷನ್ ಪರಿಚಯವನ್ನು ನೀಡಿದರು.

ಸಂಸ್ಥೆಯ ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜರವರು ಸ್ವಾಗತಿಸಿ, ಸಹ ಕಾರ್ಯದರ್ಶಿ ಲೀನ ಡಿಸೋಜ ವಂದಿಸಿದರು.  ಆಶ್ರಮದ ನಿರ್ಧೇಶಕರಾದ ಶ್ರೀ ಯುತ ರೋಹಿತರವರು ಪಶ್ಚಿಮ್ ರಿüೀಹಾಬ್ ಆಶ್ರಮವು ನಡೆದು ಬಂದ ದಾರಿಯ ಬಗ್ಗೆ ತಿಳಿಸಿದರು.  ಎಸೋಷಿಯೇಷನ್ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥತರಿದ್ದರು


Spread the love

Exit mobile version