ಅಸೋಡು ದೇವಸ್ಥಾನದ ಜಾತ್ರೆಯಲ್ಲಿ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ಮನವಿ

Spread the love

ಅಸೋಡು ದೇವಸ್ಥಾನದ ಜಾತ್ರೆಯಲ್ಲಿ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ಮನವಿ

ಕುಂದಾಪುರ: ಇಲ್ಲಿಗೆ ಸಮೀಪದ ಅಸೋಡು ಗ್ರಾಮದ ಬೆಂಕಿಕಾನ್ ನಂದಿಕೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಹಿಂದೂ ಸಮಾಜದವರಲ್ಲದೆ, ಅನ್ಯಮತೀಯರಿಗೆ ಅಂಗಡಿ ಹಾಕಲು ಅವಕಾಶ ನೀಡಬಾರದಾಗಿ ಅಸೋಡು ಗ್ರಾಮಸ್ಥರು ಹಾಗೂ ಹಿಂದೂ ಪರ ಸಂಘಟನೆಯ ಪ್ರಮುಖರು ದೇವಸ್ಥಾನದ ಆಡಳಿತ ಮಂಡಳಿಗೆ ಮನವಿ ನೀಡಿದ್ದಾರೆ.

ದೇವಸ್ಥಾನದ ಆಢಲಿತ ಸಮಿತಿಯ ಪ್ರಮುಖರಾದ ಅಜಿತ್ ಶೆಟ್ಟಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಹಿಂದೂ ಸಂಘಟನೆಯ ಪ್ರಮುಖರಾದ ಪ್ರದೀಪ್ ಮಾರ್ಕೋಡು, ಅಶೋಕ್ ಶೇರಿಗಾರ್ ಅಸೋಡು, ಮಾರುತಿ ಕೋಟೇಶ್ವರ, ಶಶಿ ಕಾಳಾವರ, ಹರ್ಷವರ್ಧನ್ ಇದ್ದರು.

ಈ ವಿಚಾರದ ಕುರಿತು ಮಾತನಾಡಿದ ಬಜರಂಗದಳ ಜಿಲ್ಲಾ ಸಂಚಾಲಕ ಸುರೇಂದ್ರ ಕೋಟೇಶ್ವರ ಅವರು, ಹಿಂದೂ ದೈವ ದೇವರಿಗೆ ಅಪಮಾನ ಮಾಡುವವರಿಗೆ, ಹಿಂದೂಗಳ ದೇವಸ್ಥಾನದ ಜಾತ್ರೆಗಳಲ್ಲಿ ಅವಕಾಶ ನೀಡುವುದು ಸರಿಯಲ್ಲ. ಬಹಿಷ್ಕಾರ ಎನ್ನುವ ಕ್ರಿಯೆಯನ್ನು ಮೊದಲು ಆರಂಭಿಸಿದ್ದು ಅವರೇ, ಅದಕ್ಕೆ ಇದು ಪ್ರತಿಕ್ರಿಯೆ ಅಷ್ಟೇ ಎಂದು ಅವರು ಹೇಳಿದ್ದಾರೆ.


Spread the love