ಅ.13 ರಿಂದ ಹಾಸನಾಂಬೆ ದರ್ಶನ

Spread the love

ಅ.13 ರಿಂದ ಹಾಸನಾಂಬೆ ದರ್ಶನ

ಹಾಸನ: ಹಾಸನಾಂಬ ದೇವಾಲಯ ಈ ಬಾರಿ ಅ.13 ರಿಂದ 11 ದಿನಗಳ ಕಾಲ ತೆರೆದು ಭಕ್ತರಿಗೆ ಹಾಸನಾಂಬೆಯ ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಗುತ್ತಿದೆ.

ಈ ಸಂಬಂಧ ಚುನಾಯಿತ ಪ್ರತಿನಿಧಿಗಳು, ಮುಜರಾಯಿ ಅಧಿಕಾರಿಗಳು, ಅರ್ಚಕರ ನೆರೆದಿದ್ದ ಸಭೆಯಲ್ಲಿ ಹಾಸನಾಂಬೆ ದರ್ಶನದ ಸಂಬಂಧ ಪೂರ್ವ ಸಿದ್ಧತೆಗಳ ಬಗ್ಗೆ ಚರ್ಚಿಸಲಾಯಿತಲ್ಲದೆ, ಅ.13 ರಿಂದ ಹಾಸನಾಂಬೆ ದೇಗುಲದ ಬಾಗಿಲು ತೆರೆಯಲು ತೀರ್ಮಾನಿಸಲಾಯಿತು. ಇನ್ನು ದೇಗುಲ ತೆರೆಯುವ ಮತ್ತು ಮುಚ್ಚುವ ನಡುವಿನ ದಿನಗಳ ನಡುವೆ ಭಕ್ತರಿಗೆ ದೇವರ ದರ್ಶನಕ್ಕೆ ಅನುಕೂಲ ಮಾಡಿಕೊಡುವುದು ಮತ್ತು ಇತರೆ ಪೂಜಾ ಕೈಂಕರ್ಯದ ಬಗ್ಗೆಯೂ ಕ್ರಮ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಇನ್ನು ದೇಗುವ ತೆರೆಯುವ ಮತ್ತು ಮುಚ್ಚುವ ದಿನದಂದು ಭಕ್ತಾಧಿಗಳಿಗೆ ದರ್ಶನ ನೀಡದಂತೆಯೂ ಸೂಚಿಸಲಾಯಿತು.

ಈ ಸಂಬಂಧ ಮಾತನಾಡಿದ ಹಾಸನ ಶಾಸಕ ಪ್ರೀತಂ ಜೆ ಗೌಡ, ಪ್ರವೇಶ ವ್ಯವಸ್ಥೆಯನ್ನು ಸುಗಮಗೊಳಿಸುವುದಕ್ಕೆ ಹಾಗೂ ಜನದಟ್ಟಣೆಯನ್ನು ನಿರ್ವಹಿಸುವುದಕ್ಕಾಗಿ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರಲ್ಲದೆ, ಈ ಸಂಬಂಧ ಜಿಲ್ಲಾಡಳಿತ ಪೊಲೀಸ್ ಇಲಾಖೆಯೊಂದಿಗೆ ಸಭೆ ನಡೆಸಲಿದೆ. ವಿಶೇಷ ಪ್ರವೇಶಕ್ಕೆ ಶುಲ್ಕ ಹಾಗೂ ವಿಶೇಷ ಪಾಸ್ ಗಳ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ನೇತೃತ್ವದಲ್ಲಿ ನಡೆಯಲಿರುವ ಚುನಾಯಿತ ಪ್ರತಿನಿಧಿಗಳ ಸಭೆಯಲ್ಲಿ ನಿರ್ಧರಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ಹಾಸನಾಂಬೆಯ ದರ್ಶನಕ್ಕೆ ಎಲ್ಲ ಭಕ್ತರಿಗೆ ಅವಕಾಶವಾಗಿರಲಿಲ್ಲ. ಈ ಬಾರಿಯ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.


Spread the love

Leave a Reply

Please enter your comment!
Please enter your name here