ಅ. 14: ದುರ್ಗಾ ಮಿತ್ರ ಮಂಡಳಿ ಹೆರ್ಗ ವತಿಯಿಂದ ತಿರಂಗಾ ಯಾತ್ರೆ

Spread the love

ಅ. 14: ದುರ್ಗಾ ಮಿತ್ರ ಮಂಡಳಿ ಹೆರ್ಗ ವತಿಯಿಂದ ತಿರಂಗಾ ಯಾತ್ರೆ

ಉಡುಪಿ: ದುರ್ಗಾ ಮಿತ್ರ ಮಂಡಳಿ ಹೆರ್ಗ ಇವರ ನೇತೃತ್ವದಲ್ಲಿ ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಅಗಸ್ಟ್ 14 ರಂದು ಭಾನುವಾರ ಸಂಜೆ 6 ಗಂಟೆಗೆ ಹೆರ್ಗ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಬೊಳ್ಝಿಕಟ್ಟೆ ವೃತ್ತದ ವರೆಗೆ ತಿರಂಗಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.

ಸಂಜೆ 6.30ಕ್ಕೆ ಯಕ್ಷಿತ್ ಮ್ಯೂಸಿಕಲ್ ಪರ್ಕಳ, ಉಡುಪಿ ದೀಪಿಕಾ ಜಿ ಆಚಾರ್ಯ ಮತ್ತು ಬಳಗದವರಿಂದ ದೇಶಭಕ್ತಿಗೀತೆ, ರಾತ್ರಿ 7.30ಕ್ಕೆ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಉಡುಪಿ ಇದರ ಜಿಲ್ಲಾ ಕಾರ್ಯದರ್ಶಿ ವಸಂತ್ ಗಿಳಿಯಾರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.


Spread the love