ಅ. 2 : ಕೆಸಿಸಿಸಿಐ ಪ್ರೇರಣಾ ಪ್ರಶಸ್ತಿ ಪ್ರದಾನ ಸಮಾರಂಭ
ಉಡುಪಿ: ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀ ಉಡುಪಿ ಜಿಲ್ಲೆ ಇದರ ಸಂಘಟನೆಯ ವಾರ್ಷಿಕ ಸಹಮಿಲನ ಮತ್ತು ಪ್ರೇರಣ ಪ್ರಶಸ್ತಿ 2025 ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಅಕ್ಟೋಬರ್ 2 ರಂದು ಕಾರ್ಕಳ ಅತ್ತೂರು ಸಂತ ಲಾರೇನ್ಸ್ ಬೆಸಿಲಿಕಾದ ಸಮುದಾಯ ಸಭಾ ಭವನದಲ್ಲಿ ನಡೆಯಲಿದೆ ಎಂದು ಸಂಘಟನೆಯ ಅಧ್ಯಕ್ಷರಾದ ಸಂತೋಷ್ ಡಿ’ಸಿಲ್ವಾ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2012 ರಲ್ಲಿ ಪ್ರಾರಂಭಗೊಂಡು 13ನೆ ವರ್ಷಕ್ಕೆ ಪಾದಾರ್ಪಣೆಗೊಂಡ ಈ ಸಂಘಟನೆ ( KCCCI ) ಕರ್ನಾಟಕ ಕ್ರೈಸ್ತ ಸಂಘಗಳ ಅಂತರಾಷ್ಟ್ರೀಯ ಒಕ್ಕೂಟ (IFKCA) ಇಫ್ಕಾ ಇದರ ಕರ್ನಾಟಕ ರಾಜ್ಯ ಸ್ಥಾಪಕಾಧ್ಯಕ್ಷರಾಗಿದ್ದ ಅನಿವಾಸಿ ಉದ್ಯಮಿ ಸನ್ಮಾನ್ಯ ಡಾ| ರೊನಾಲ್ಡ್ ಕೊಲಾಸೊ ಇವರ ಕನಸಿನ ಕೂಸು ಹಾಗೂ ಅದನ್ನು ಪ್ರಾಯೋಜಿಸಿದ ಇಫ್ಕಾ ಸಂಘಟನೆಯ ಅಂದಿನ ಜಿಲ್ಲಾಧ್ಯಕ್ಷ ಶ್ರೀ ಲೂವಿಸ್ ಲೋಬೊ ಇವರ ಮುಂದಾಳತ್ವದಲ್ಲಿ ಶ್ರೀ ಅಲ್ವಿನ್ ಕ್ವಾಡ್ರಸ್, ಶ್ರೀ ಜಿತೇಂದ್ರ ಪುಡ್ತಾದೊ. ಡಾ| ನೇರಿ ಕರ್ನೇಲಿಯೋ, ಶ್ರೀ ಪ್ರಶಾಂತ್ ಚಿತ್ತನ್ನ, ಶ್ರೀ ಸಂತೋಷ್ ಡಿ ಸಿಲ್ವ ಹಾಗೂ ದಿ ರಾಬರ್ಟ್ ಫುರ್ಟಾಡೊ ಇವರುಗಳ ಸಹಭಾಗಿತ್ವದಲ್ಲಿ ಸನ್ಮಾನ್ಯ ಡಾ| ಜೆರಿ ವಿನ್ಸೆಂಟ್ ಡಾಯಸ್ ಇವರ ಘನ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡಿತು. ಈ ಸಂಘಟನೆ ಸಹಕಾರಿ ಸೊಸೈಟಿ ಕಾಯ್ದೆ 1860 ಅಡಿಯಲ್ಲಿ ನೊಂದಾವಣೆಗೊಂಡು ಮಾಂಡವಿ ಕೋರ್ಟ್ ಕಾಂಪ್ಲೆಕ್ಸ್ ನಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೊಂದಿದೆ.
ಈ ಸಂಸ್ಥೆಯ ಕಾರ್ಯವ್ಯಾಪ್ತಿ ಕರಾವಳಿ ಭಾಗದ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಒಳಗೊಂಡಿದ್ದರೂ ಸದ್ಯಕ್ಕೆ ಇದರ ಕಾರ್ಯವ್ಯಾಪ್ತಿಯನ್ನು ಉಡುಪಿ ಜಿಲ್ಲೆಗೆ ಸೀಮಿತಗೊಳಿಸಿದ್ದೇವೆ. ಕ್ರೈಸ್ತ ಸಮಾಜದ ಎಲ್ಲಾ ವರ್ಗಗಳನ್ನು (ಕೆಥೋಲಿಕ್. ಪ್ರೊಟೆಸ್ಟೆಂಟ್, ಸೀರಿಯನ್ ಒರ್ತೊಡೊಕ್ಸ್ ಹಾಗೂ ಇನ್ನಿತರ) ಒಳಗೊಂಡು ಜಿಲ್ಲೆಯ ಎಲ್ಲಾ ಉದ್ದಿಮೆದಾರರು, ವ್ಯಾಪಾರಸ್ಥರು, ವೃತ್ತಿಪರರು ಹಾಗೂ ಕೃಷಿಕರು ಸದಸ್ಯರಾಗಿರುತ್ತಾರೆ. ಅಂದು ಕೇವಲ 30 ಜನ ಅಜೀವ ಸದಸ್ಯರಿಂದ ಪ್ರಾರಂಭಗೊಂಡ ಈ ಸಂಸ್ಥೆ ಇಂದು 170 ರ ಗಡಿ ದಾಟಿದೆ ಎಂದು ತಿಳಿಸಲು ಹೆಮ್ಮೆ ಪಡುತ್ತೇವೆ.
ಪ್ರಸ್ತುತ ಸಂಘಟನೆಯ ಗೌರವ ಅಧ್ಯಕ್ಷರಾಗಿ ಡಾ| ಜೆರಿ ವಿನ್ಸೆಂಟ್ ಡಾಯನ್, ಅಧ್ಯಕ್ಷರಾಗಿ ಶ್ರೀ ಸಂತೋಷ್ ಡಿ ಸಿಲ್ವ, ಕಾರ್ಕಳ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಆಲ್ವಿನ್ ಕ್ವಾಡ್ರಸ್, ಕೋಟ ಹಾಗೂ ಖಜಾಂಜಿಯಾಗಿ ಶ್ರೀ ಮ್ಯಾಕ್ಸಿಮ್ ಸ್ಟೇಫನ್ ಸಲ್ದಾನ, ಉಡುಪಿ ಇವರುಗಳು ಸೇವೆ ಸಲ್ಲಿಸುತ್ತಿದ್ದಾರೆ.
ಕಳೆದ 12 ವರ್ಷಗಳಲ್ಲಿ ಈ ಸಂಸ್ಥೆ ತನ್ನ ಸದಸ್ಯರಿಗೆ ಉದ್ಯಮ ಶೀಲ ಶಿಬಿರಗಳು, ಕಾರ್ಯಾಗಾರಗಳು ಹಾಗೂ ಉದ್ಯಮಕ್ಕೆ ಸಂಬಂಧಪಟ್ಟಂತೆ ಜಿ ಎಸ್ ಟಿ./ ಆದಾಯ ತೆರಿಗೆ, ಕೇಂದ್ರ ಹಾಗೂ ರಾಜ್ಯ ಬಜೆಟ್ ವಿಚಾರ ವಿನಿಮಯ ಹಾಗೂ ಇನ್ನಿತರ ಕಾನೂನು ಮಾಹಿತಿಗಳನ್ನು ನಡೆಸುತ್ತಾ ಬಂದಿದೆ.
ಕಳೆದ ಐದು ವರ್ಷಗಳಿಂದ ಸಮುದಾಯದ ಅರ್ಹ ಉದ್ಯಮಿಗಳನ್ನು ಗುರುತಿಸಿ ಪ್ರೇರಣಾ ಪ್ರಶಸ್ತಿ (PRERANA AWARD) ನೀಡಿ ಗೌರವಿಸುವ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿರುತ್ತದೆ. ಇದೇ ಬರುವ ಅಕ್ಟೋಬರ್ 2 ರಂದು ಕಾರ್ಕಳದ ಅತ್ತೂರಿನ ಸಂತ ಲಾರೆನ್ಸ್ ಬೆಸಿಲಿಕಾದ ಸಮುದಾಯ ಭವನದಲ್ಲಿ ನಡೆಯುವ ಸಂಘಟನೆಯ ವಾರ್ಷಿಕ ಸಹಮಿಲನ ಮತ್ತು ಪ್ರೇರಣ ಪ್ರಶಸ್ತಿ 2025 ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಈ ಕೆಳಗಿನ ವಿಶೇಷ ಸಾಧಕರನ್ನು ಗೌರವಿಸಲಿದ್ದೇವೆ.
- ವರ್ಷದ ಉದ್ಯಮಿ ಪ್ರಶಸ್ತಿ 2025 – ಶ್ರೀ ಫ್ರಾನ್ಸಿಸ್ ಡಿ’ಸೋಜಾ, ಪಲಿಮಾರು, ಚೇರ್ಮನ್, ಎಫ್4 ಹೋಲ್ಡಿಂಗ್ಸ್(ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಮತ್ತು ಆಡಳಿತ ನಿರ್ದೇಶಕರು, ಎಫ್4 ಎಂಜಿನಿಯರಿಂಗ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್.
- ವರ್ಷದ ಮಹಿಳಾ ಉದ್ಯಮಿ ಪ್ರಶಸ್ತಿ 2025 – ಶ್ರೀಮತಿ ಲವಿಟಾ ಅಂದ್ರಾದೆ, ಉಡುಪಿ.
- ವರ್ಷದ ಯುವ ಉದ್ಯಮಿ ಪ್ರಶಸ್ತಿ 2025 – ಅರುಣ್ ಸುಶೀಲ್ ಕೋಟ್ಯಾನ್, ಸುಭಾಷ್ ನಗರ.
- ವರ್ಷದ ಪ್ರಗತಿಪರ ಕೃಷಿಕ ಪ್ರಶಸ್ತಿ 2025 – ಡಾ. ಜೋಸೆಫ್ ಲೋಬೋ, ಶಂಕರಪುರ.
ಸಂಜೆ 6.00 ಗಂಟೆಗೆ ನಡೆಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಡಾ. ಜೆರಿ ವಿನ್ಸೆಂಟ್ ಡಯಾಸ್ ಗೌರವ ಅಧ್ಯಕ್ಷರು, ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಜೆರಾಲ್ಡ್ ಐಸಾಕ್ ಲೋಬೊ, ರೈಟ್ ರೆವರೆಂಡ್ ಹೇಮಚಂದ್ರ ಕುಮಾರ್, ಧರ್ಮಾಧ್ಯಕ್ಷರು CSI ಸಭೆ ಇವರುಗಳು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಮೊದಲು ಈಗಾಗಲೇ ಉದ್ಯಮದಲ್ಲಿ ತೊಡಗಿಕೊಂಡಿರುವ ಹಾಗೂ ಹೊಸದಾಗಿ ಉದ್ಯಮವನ್ನು ಪ್ರಾರಂಭಿಸಲು ಬಯಸುವ ಆಸಕ್ತ ಕ್ರೈಸ್ತ ಯುವ ಉದ್ಯಮಿಗಳಿಗೆ ಪರಿಣಿತ ಸಂಪನ್ಮೂಲ ವ್ಯಕ್ತಿಗಳಾದ ಶ್ರಿ ವಾಲ್ಟರ್ ನಂದಳಿಕೆ, ಸ್ಥಾಪಕರು ಮತ್ತು ಪ್ರಧಾನ ಸಂಪಾದಕರು, ದಾಯ್ದಿವರ್ಲ್ಡ್ ಹಾಗೂ ಜೇ ಸಿ ಸೌಜನ್ಯ ಹೆಗ್ಡೆ, ಉದ್ಯಮಿ, ನಿರೂಪಕರು, ಕಾರ್ಪೋರೇಟ್ ತರಬೇತುದಾರರು ಇವರಿಂದ ಮಾಹಿತಿ ಕಾರ್ಯಗಾರ ನಡೆಯಲಿದೆ. ಸಂಜೆ ವೇದಿಕೆ ಕಾರ್ಯಕ್ರಮದ ನಂತರ ಮನೋರಂಜನ ಕಾರ್ಯಕ್ರಮ ಹಾಗೂ ಸದಸ್ಯ ಕುಟುಂಬದ ಸದಸ್ಯರ ಸಹ ಮಿಲನದೊಂದಿಗೆ ಕಾರ್ಯಕ್ರಮ ಕೊನೆಗೊಳ್ಳಲಿದೆ.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಆಲ್ವಿನ್ ಕ್ವಾಡ್ರಸ್, ಖಜಾಂಚಿ ಮ್ಯಾಕ್ಷಿಮ್ ಸ್ಟೇಫನ್ ಸಲ್ಡಾನಾ, ಸಹಕಾರ್ಯದರ್ಶಿ ವಿಲ್ಸನ್ ಡಿಸೋಜಾ, ನಿರ್ದೇಶಕರಾದ ಜೀವನ್ ಸಾಲಿನ್ಸ್ ಉಪಸ್ಥಿತರಿದ್ದರು.