ಅ. 24ರಂದು ಸಂತ ಮದರ್ ತೆರೇಸಾ ವಿಚಾರ ವೇದಿಕೆಯಿಂದ ದೀಪಾವಳಿ ಆಚರಣೆ

Spread the love

ಅ. 24ರಂದು ಸಂತ ಮದರ್ ತೆರೇಸಾ ವಿಚಾರ ವೇದಿಕೆಯಿಂದ ದೀಪಾವಳಿ ಆಚರಣೆ

ಮಂಗಳೂರು: ದೀಪಾವಳಿ ಹಬ್ಬವು ಭಾರತದ ಪ್ರಸಿದ್ಧ ಹಬ್ಬಗಳಲ್ಲಿ ಒಂದಾಗಿದ್ದು ದೀಪಾವಳಿಯನ್ನು ಎಲ್ಲೆಡೆ ಬಹಳಷ್ಟು ಉತ್ಸಾಹ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಬೆಳಕಿನ ಹಬ್ಬವು ಎಂದು ಕರೆಯಲ್ಪಡುವ ಈ ಹಬ್ಬವು ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಮತ್ತು ಕೆಟ್ಟದರ ಮೇಲೆ ಒಳ್ಳೆಯದನ್ನು ಸೂಚಿಸುತ್ತದೆ. ಈ ಹಬ್ಬದ ಪ್ರಯುಕ್ತ ಸಂತ ಮದರ್ ತೆರೇಜಾ ವಿಚಾರ ವೇದಿಕೆ ಮಂಗಳೂರು ಇದರ ವತಿಯಿಂದ ಅಕ್ಟೋಬರ್ 24ರಂದು ಸೋಮವಾರ ಸಂಜೆ 5:30 ಗಂಟೆಗೆ ನಂತೂರು ಸಂದೇಶ ಪ್ರತಿಷ್ಟಾನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ವೇದಿಕೆಯ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ, ಪ್ರೀತಿ ಎಂಬ ದೀಪ, ಸ್ನೇಹಮಯ ಹಣತೆಯಿಂದ ಮಾನವತೆಯನ್ನು ಹರಡುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಆ ದಿನ ಗೂಡುದೀಪ ಸ್ಪರ್ದೆಯನ್ನು ಏರ್ಪಡಿಸಿದ್ದು 24ರಂದು ಸೋಮವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯ ಒಳಗೆ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿ ಸಂಘಟಕರು ನಿಗದಿಪಡಿಸಿದ ಸ್ಥಳದಲ್ಲಿ ಗೂಡು ದೀಪವನ್ನು ವ್ಯವಸ್ಥೆ ಮಾಡಬೇಕು. ರೆಡಿಮೇಡ್ ವಸ್ತುಗಳನ್ನು ಬಳಸದೆ ಸ್ವಪ್ರಯತ್ನದಿಂದ ಗೂಡು ದೀಪವನ್ನು ರಚಿಸತಕ್ಕದ್ದು ಕ್ರಿಯಾತ್ಮಕವಾಗಿ ಹಾಗೂ ಕಲಾತ್ಮಕವಾಗಿ ರಚಿಸಲ್ಪಟ್ಟ ಗೂಡು ದೀಪಗಳಿಗೆ ವಿಶೇಷ ಆದ್ಯತೆ. ತಮ್ಮ ಕಲಾಕ್ರತಿಯು ಉದ್ದಳತೆ 3’ x 2’ ಫೀಟ್ ಗಿಂತ ಮೀರಿರಬಾರದು. ಪ್ರಥಮ, ದ್ವಿತಿಯ, ತ್ರತಿಯ ನಗದು ಹಾಗೂ ಫಲಕ ಹಾಗೂ ಎರಡು ಸಮಾಧಾನಕರ ಬಹುಮಾನಗಳ ವ್ಯವಸ್ಥೆ ಮಾಡಲಾಗಿದೆ.

ನೊಂದಾವಣಿ 22.10.2022ರಂದು ಶನಿವಾರ ಸಂಜೆ 4 ಗಂಟೆಯ ಒಳಗೆ ಮಾಡತಕ್ಕದ್ದು. ನೊಂದಾವಣಿ ಮಾಡಲು 9448503739, 9845291088 , 9449051515 ಈ ನಂಬರನ್ನು ಕರೆಮಾಡುವುದು. ಈ ಕಾರ್ಯಕ್ರಮದಲ್ಲಿ ನಮ್ಮ ಮಂಗಳೂರು ಧರ್ಮಪ್ರಾಂತ್ಯದ ಧರ್ಮಧ್ಯಕ್ಷರಾದ ಅತೀ ವಂದನೀಯ ಪೀಟರ್ ಪಾವ್ಲ್ ಸಲ್ಡಾನ್ಹ ಕಾರ್ಯಕ್ರಮ ಉದ್ಘಾಟಿಸಲಿದ್ದು, ವೇದಿಕೆ ಅಧ್ಯಕ್ಷರಾದ ಶ್ರೀ ರೋಯ್ ಕ್ಯಾಸ್ತೆಲಿನೊ ಅಧ್ಯಕ್ಷತೆ ವಹಿಸಲಿರುವರು. ಮಂಗಳೂರು ವಿಶ್ವವಿಧ್ಯಾನಿಲಯದ ಉಪಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯೆಡಪಡಿತಾಯ ಹಾಗೂ ವಿಜಯ ಕರ್ನಾಟಕ ದಿನಪತ್ರಿಕೆ ಮಂಗಳೂರು ಇದರ ಮುಖ್ಯ ವರದಿಗಾರರಾದ ಶ್ರೀ ಮಹಮ್ಮದ್ ಅರೀಫ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿರುವರು.

ಕಾರ್ಯಕ್ರಮದಲ್ಲಿ ಸ್ಪರಾಂಜಲಿ ಮ್ಯೂಜಿಕ್ ಸ್ಕೂಲಿನ ಮಕ್ಕಳು ಹಾಗೂ ವಂ. ವಾಲ್ಟರ್ ಅಲ್ಬುಕರ್ಕ್ ಮೆಮೊರಿಯಲ್ ಸಂಗೀತ ಪಂಗಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿರುವುದು ಎಂದು ವೇದಿಕೆಯ ಅಧ್ಯಕ್ಷರಾದ ಶ್ರೀ ರೋಯ್ ಕ್ಯಾಸ್ತೆಲಿನೊ ತಿಳಿಸಿದ್ದಾರೆ.

ಪತ್ರಿಕಗೋಷ್ಟಿಯಲ್ಲಿ ವೇದಿಕೆಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ,ಸಂಘಟಕರಾದ ಸುಶೀಲ್ ನೊರೊನ್ಹ, ಮಾಜಿ ಮೇಯರ್ ಅಶ್ರಫ್, ಮಾಜಿ ಕೊರ್ಪೊರೇಟರ್ ಪ್ರಕಾಶ್ ಸಾಲಿಯಾನ್ ಹಾಗೂ ಕಥೋಲಿಕ್ ಸಭಾ ಮಂಗಳೂರು ಪ್ರದೇಶ್ ಅಧ್ಯಕ್ಷರಾದ ಶ್ರಿ ಸ್ಟ್ಯಾನಿ ಲೋಬೊ ಉಪಸ್ಥಿತರಿದ್ದರು.


Spread the love