ಅ. 26: ಪೆರ್ಣಂಕಿಲ ಶಂಕರ ಪ್ರತಿಷ್ಠಾನ ವತಿಯಿಂದ ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ

Spread the love

ಅ. 26: ಪೆರ್ಣಂಕಿಲ ಶಂಕರ ಪ್ರತಿಷ್ಠಾನ ವತಿಯಿಂದ ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ

ಉಡುಪಿ: ಪೆರ್ಣಂಕಿಲ ಶಂಕರ ಪ್ರತಿಷ್ಠಾನ ವತಿಯಿಂದ ಕಾಪು ಬೀಚ್ ನಲ್ಲಿ ಅಕ್ಟೋಬರ್ 26ರಂದು ಸಂಜೆ 4 ಗಂಟೆಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ ಆಯೋಜಿಸಲಾಗಿದೆ.

ಸ್ಪರ್ಧೆಯಲ್ಲಿ ಮೂಲೆಗಳಿರುವ ಗೂಡುದೀಪ ಕಡ್ಡಾಯವಾಗಿದ್ದು, ಬಣ್ಣದ ಕಾಗದ, ಗ್ಲಾಸ್ ಪೇಪರ್, ಅಥವಾ ಬೆಗಡೆ ಉಪಯೋಗಿಸಿರಬೇಕು.

ಪ್ಲಾಸ್ಟಿಕ್, ಫ್ಲೆಕ್ಸ್, ಫೈಬರ್, ಥರ್ಮಾಕೋಲ್, ಹೂವು ಮರ, ಗ್ಲಾಸ್ ಇತ್ಯಾದಿಗಳನ್ನು ಉಪಯೋಗಿಸಿದರೆ ಸ್ಪರ್ಧೆಯಲ್ಲಿ ಪರಿಗಣಿಸುವುದಿಲ್ಲ. ಗೂಡುದೀಪಕ್ಕೆ ಬಾಲ ಇರಲೇಬೇಕು. ಸ್ಪರ್ಧೆಗೆ ವಯೋಮಿತಿ ಪರಿಗಣಿಸುವುದಿಲ್ಲ ಮತ್ತು ತೀರ್ಪುಗಾರರ ನಿರ್ಣಯವೇ ಅಂತಿಮವಾಗಿದೆ.

ವಿಜೇತರಿಗೆ ಪ್ರಥಮ ಬಹುಮಾನ ರೂ 11111, ದ್ವಿತೀಯ ರೂ 7777 ಮತ್ತು ತೃತೀಯ ಬಹುಮಾನ ರೂ 5555 ಇರಲಿದೆ

ಕಾರ್ಯಕ್ರಮದಲ್ಲಿ ಆಕರ್ಷಕ ಸುಡುಮದ್ದು ಪ್ರದರ್ಶನ ಇರಲಿದ್ದು, ಹೆಚ್ಚಿನ ಮಾಹಿತಿಗಾಗಿ 9886619748 (ಪ್ರವೀಣ್ ಪೂಜಾರಿ), 9008169918 (ಸಂತೋಷ್ ಕುಮಾರ್) ಸಂಪರ್ಕಿಸಬಹುದು ಎಂದು ಪ್ರತಿಷ್ಠಾನದ ಸಂಚಾಲಕರಾದ ಪೆರ್ಣಂಕಿಲ ಶ್ರೀಶ ನಾಯಕ್ ಹೇಳಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ


Spread the love