ಅ. 29: ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದಿಂದ ಸ್ನೇಹ ಸಮಾವೇಶ, ಪ್ರಶಸ್ತಿ ಪ್ರದಾನ

Spread the love

ಅ. 29: ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದಿಂದ ಸ್ನೇಹ ಸಮಾವೇಶ, ಪ್ರಶಸ್ತಿ ಪ್ರದಾನ

ಉಡುಪಿ: ಜಿಲ್ಲಾ ಮುಸ್ಲಿಮ್ ಒಕ್ಕೂಟವು, ಕಳೆದ ಎರಡು ವರ್ಷಗಳಿಂದ ಹಾಕಿಕೊಂಡಿರುವ ಯೋಜನೆಯಂತೆ ಸಮಾಜದಲ್ಲಿ ಮಾನವೀಯ ಮೌಲ್ಯಗಳ ಉಪ್ಪಾನಕ್ಕಾಗಿ ಹಾಗೂ ಪ್ರೀತಿ, ವಿಶ್ವಾಸ ಮತ್ತು ಸಾಮರಸ್ಯದ ವಾತಾವರಣದ ನಿರ್ಮಾಣಕ್ಕಾಗಿ ಶ್ರಮಿಸುವ, ಉಡುಪಿ ಜಿಲ್ಲೆಯ ಹಿರಿಯ ಗಣ್ಯರನ್ನು ಗುರುತಿಸಿ, ಪ್ರತೀ ಎರಡು ವರ್ಷಗಳಿಗೊಮ್ಮೆ ಪ್ರದಾನಿಸಲಾಗುವ “ಮಾನವರತ್ನ ಪ್ರಶಸ್ತಿಗೆ ಈ ದಾರಿ ನಮ್ಮ ಜಿಲ್ಲೆಯ ಮಾನವೀಯ ಹೋರಾಟಗಾರ, ಸೌಹಾರ್ದ ಪ್ರೇಮಿ, ವಿಚಾರವಾದಿ, ಸಾಹಿತಿ ಹಾಗೂ ವಿವಿಧ ಸಂಘಸಂಸ್ಥೆಗಳಲ್ಲಿ ಮಡಿದಿರುವ ಹಿರಿಯರಾದ ಗೋಪಾಲ್ ಬಿ ಶೆಟ್ಟಿ ಯವರನ್ನು ಆಯ್ಕೆ ಮಾಡಲಾಗಿದೆ. ಹಾಗೆಯೇ ಸಮಾಜದ ಕಲ್ಯಾಣಕ್ಕಾಗಿ ಶ್ರಮಿಸಿದ ಹಿರಿಯರಿಗೆ ನೀಡಲಾಗುವ “ಸೇವಾರತ್ನ ಪ್ರಶಸ್ತಿಗೆ ಸಮುದಾಯ ಸೇವೆ ಹಾಗೂ ಸಮಾಜಸೇವೆಯಲ್ಲಿ ತಮ್ಮನ್ನು ಸದಾ ತೊಡಗಿಸಿಕೊಂಡಿರುವ ಹಿರಿಯರಾದ ಹಾಜಿ ಅಬ್ದುಲ್ಲಾ ಪರ್ಕಳ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಪ್ರದಾನ ಸಮಾರಂಭದ ಸಂಚಾಲಕರಾದ ಇರ್ಷಾದ್ ಅಹ್ಮದ್ ನೇಜಾರ್ ಹೇಳಿದರು.

ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪ್ರಶಸ್ತಿಯು ತಲಾ ಇಪ್ಪತೈದು ಸಾವಿರ ನಗದು, ಫಲಕ ಮತ್ತು ಸನ್ಮಾನಗಳನ್ನೊಳಗೊಂಡಿದ್ದು, ಇದು ಒಕ್ಕೂಟದ ಎರಡನೇ ಪ್ರಶಸ್ತಿ ಪ್ರದಾನ ಸಮಾರಂಭವಾಗಿದೆ.

ಪ್ರಸ್ತುತ ಪ್ರಶಸ್ತಿಗಳನ್ನು ಅಕ್ಟೋಬರ್ 29ನೇ ತಾರೀಕಿನಂದು ಸಾಯಂಕಾಲ 6.30ಕ್ಕೆ ಉಡುಪಿ, ಅಂಬಾಗಿಲಿನ ಅಮೃತ್‌ ಗಾರ್ಡ‌ನ್ ಸಭಾಭವನದಲ್ಲಿ ನಡೆಯಲಿರುವ ವಿವಿಧ ಸಮುದಾಯಗಳ ಸ್ನೇಹ ಸಮಾವೇಶದಲ್ಲಿ ಪ್ರದಾನಿಸಲಾಗುವುದು.

ಈ ಸಂದರ್ಭದಲ್ಲಿ ರೂಢಿಯಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ವಿವಿಧ ಸಮುದಾಯಗಳ ಹಿರಿಯ ವ್ಯಕ್ತಿಗಳನ್ನೂ ಕೂಡಾ ಸನ್ಮಾನಿಸಲಾಗುತ್ತಿದ್ದು, ಈ ಬಾರಿ ಅಲೆವೂರು ಗಣಪತಿ ಕಿಣಿ, ಜನಾರ್ಧನ ತೋನ್ಸೆ, ಈಶ್ವರ ಮಲ್ಪೆ ಹಾಗೂ ಕುಮಾರಿ ಸುಶೀಲ ನಾಡ ಸನ್ಮಾನಿಸಲ್ಪಡಲಿದ್ದಾರೆ.

ಈ ಬಾರಿಯಿಂದ ಸಮಾಜ ಸೇವೆಯಲ್ಲಿ ತೊಡಗಿರುವ ಸಂಸ್ಥೆಗಳನ್ನೂ ಗುರುತಿಸಿ ಗೌರವಿಸುವ ಯೋಜನೆಯನ್ನೂ ಹೊಸದಾಗಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಹಾಕಿಕೊಂಡಿದ್ದು, ಆ ಪ್ರಕಾರ ಈ ಸಲ ಶೈಕ್ಷಣಿಕ ರಂಗದಲ್ಲಿ ತಮ್ಮ ಸೇವೆಗಾಗಿ ಮೂಳೂರಿನ ಅಲ್ ಇಹಾನ್ ಸಮೂಹ ಶಿಕ್ಷಣ ಸಂಸ್ಥೆ ಹಾಗೂ ವಿಶೇಷ ಮಕ್ಕಳ ಸೇವೆಗಾಗಿ ಪಾಂಬೂರಿನ ಮಾನಸ ವಿಶೇಷ ಮಕ್ಕಳ ಶಾಲೆಗಳನ್ನು ಆಯುಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯರಾದ ಬಿ.ಕೆ ಹರಿಪ್ರಸಾದ್, ಮುಖ್ಯ ಭಾಷಣ ಮಾಡಲಿಲ್ಲ, ವಿಧಾನಸಭೆ ವಿಪಕ್ಷ ಉಪನಾಯಕ ಮತ್ತು ಮಾಜಿ ಸಚಿವ ಯುಟಿ ಖಾದರ್ ಮತ್ತು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್‌ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮವನ್ನು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದ ಸಂಶೋಧನಾ ಮತ್ತು ಬೋಧನಾ ಸಹಾಯಕಿ ಡಾ. ಹಸೀನಾ ಎಚ್‌.ಕೆ ಉದ್ಘಾಟಿಸಲಿದ್ದು ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸಾಹೇಬ್ ಕೋಟಿ ವಹಿಸಲಿದ್ದಾರೆ.

ಉಡುಪಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಕೆ.ರಮೇಶ್‌ ಕಾಂಚನ್‌, ಜನತಾದಳ ಜಿಲ್ಲಾಧ್ಯಕ್ಷರಾದ ಯೋಗಿಶ್ ಶೆಟ್ಟಿ, ಸಿ.ಪಿ. ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷ ಜನಾಬ್ ಅಬೂಬಕರ್ ನೇಜಾ‌, ದಲಿತ ಸಂಘರ್ಷ ಸಮಿತಿ ಸಂಚಾಲಕರಾದ ಸುಂದರ್ ಮಾಸ್ಟರ್ ಹಾಗೂ ಕ್ರೈಸ್ತ ಮುಖಂಡರಾದ ವಿನೋದ್‌ ಕ್ರಾಸ್ತ್ರ ಗೌರವ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. ಜನಾಬ್ ಬಿ. ಎ. ಮುಹಮ್ಮದ್ ಅಲಿಯವರು ಕಾರ್ಯಕ್ರಮ ನಿರೂಪಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಕೋಟ, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮೌಲಾ, ಉಪಾಧ್ಯಕ್ಷರಾದ ಇದ್ರೀಸ್ ಹೂಡೆ, ಕಾರ್ಯದರ್ಶಿ ಇಸ್ಮಾಯಿಲ್ ಹುಸೇನ್ ಕಟಪಾಡಿ ಉಪಸ್ಥಿತರಿದ್ದರು.


Spread the love