ಅ.31 ಮತ್ತು ನ.1ರಂದು ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಎರಡು ದಿನ ನೀರು ಪೂರೈಕೆಯಲ್ಲಿ ವ್ಯತ್ಯಯ

Spread the love

ಅ.31 ಮತ್ತು ನ.1ರಂದು ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಎರಡು ದಿನ ನೀರು ಪೂರೈಕೆಯಲ್ಲಿ ವ್ಯತ್ಯಯ
 

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಅ.31 ಮತ್ತು ನ.1ರಂದು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಈ ಬಗ್ಗೆ ನಗರಸಭೆ ಪ್ರಕಟಣೆ ನೀಡಿದ್ದು, ಬಜೆ ನೀರು ಸರಬರಾಜು ರೇಚಕ ಸ್ಥಾವರದಲ್ಲಿ ಪ್ಯಾನೆಲ್ ಬೋರ್ಡ್ ಟ್ರಾನ್ಸ್ ಫಾರ್ಮರ್ ಹಾಗೂ ಮೋಟಾರ್ ಬದಲಾವಣೆ ಮಾಡುವ ಕಾಮಗಾರಿ ನಡೆಯಲಿದೆ.

ಈ ಕಾರಣದಿಂದ ಸೋಮವಾರ ಮತ್ತು ಮಂಗಳವಾರ ಉಡುಪಿ ನಗರ ಸಭಾ ವ್ಯಾಪ್ತಿಯ 35 ವಾರ್ಡುಗಳಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಹೀಗಾಗಿ ಸಾರ್ವಜನಿಕರು ಇಂದೇ ಅಗತ್ಯ ನೀರು ಶೇಖರಿಸಿಡಬೇಕು ಎಂದು ಸೂಚಿಸಲಾಗಿದೆ.


Spread the love