ಅ. 5ರಂದು ಉದ್ಯಾವರದಲ್ಲಿ ರೆಮೋನಾ ಎವೆಟ್ ಪಿರೇರಾರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ
ಉಡುಪಿ: ಭರತನಾಟ್ಯದಲ್ಲಿ ನಿರಂತರ 7 ದಿನಗಳ ಪ್ರದರ್ಶನದೊಂದಿಗೆ ದೀರ್ಘಾವಧಿಯ ನೃತ್ಯದ ಮೂಲಕ 170 ಗಂಟೆಗಳ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೃಷ್ಟಿಸಿ ಸಂತ ಅಲೋಶಿಯಸ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ನೃತ್ಯ ಪಟು ರೆಮೋನಾ ಎವೆಟ್ ಪಿರೇರಾ ಅವರಿಗೆ ಸಾಂಸ್ಕೃತಿಕ ಸಂಘಟನೆ ನಿರಂತರ್ ಉದ್ಯಾವರ ಹಾಗೂ ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ವತಿಯಿಂದ ಅಗೋಸ್ತ್ 5 ಮಂಗಳವಾರ ಸಂಜೆ 5 ಗಂಟೆಗೆ ಸಂತ ಫ್ರಾನ್ಸಿಸ್ ಝೇವಿಯರ್ ಸಭಾಂಗಣದಲ್ಲಿ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ, ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ, ಸಂತ ಅಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾಲಯ ಮಂಗಳೂರು ಇದರ ಉಪಕುಲಪತಿ ವಂ|ಡಾ|ಪ್ರವೀಣ್ ಮಾರ್ಟಿಸ್, ಕುಲಸಚಿವ ಡಾ. ರೊನಾಲ್ಡ್ ನಜ್ರೆತ್, ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚಿನ ಧರ್ಮಗುರು ವಂ|ಅನಿಲ್ ಡಿಸೋಜಾ, ಲಯನ್ಸ್ ಜಿಲ್ಲೆ 317C ಜಿಲ್ಲಾ ಗವರ್ನರ್ Mjf ಲ. ಸಪ್ನಾ ಸುರೇಶ್, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಸಂದೀಪ್, ವಾಲ್ಟರ್ ನಂದಳಿಕೆ, ಎಂಸಿಸಿ ಬ್ಯಾಂಕ್ ಮಂಗಳೂರು ಅಧ್ಯಕ್ಷರಾದ ಅನಿಲ್ ಲೋಬೊ, ಮಾಂಡವಿ ಬಿಲ್ಡರ್ಸ್ ಉಡುಪಿ ಇದರ ಜೇಸನ್ ಡಾಯಸ್, ಫೆರ್ನಾಂಡಿಸ್ ಗ್ರೂಪ್ ಉಡುಪಿ- ಮಂಗಳೂರು ಮುಖ್ಯಸ್ಥರಾದ ವಿಲ್ಸನ್ ಫೆರ್ನಾಂಡಿಸ್, ವಿಶ್ವ ಶಾಂತಿ ಸಮಿತಿ, ಬೆಂಗಳೂರು ನಿರ್ದೇಶಕರಾದ ಡಾ. ಶೇಕ್ ವಹಿದ್ ದಾವುದ್, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲ ಮಹಿಳಾ ವಿಭಾಗದ ಅಧ್ಯಕ್ಷರಾದ ಗೀತಾಂಜಲಿ ಸುವರ್ಣ, ಉಡುಪಿಯ ಸಮಾಜ ಸೇವಕರಾದ ಕೃಷ್ಣಮೂರ್ತಿ ಆಚಾರ್ಯ, ಕಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷರಾದ ರೊನಾಲ್ಡ್ ಡಿ’ಆಲ್ಮೇಡಾ, ಉದ್ಯಾವರೈಟ್ಸ್ ದುಬೈ ಯುಎಇ ಕಾರ್ಯದರ್ಶಿ ರಾಯನ್ ಸುವಾರಿಸ್, ಐಸಿವೈಎಂ ಉಡುಪಿ ವಲಯಾಧ್ಯಕ್ಷರಾದ ರೋವಿನ್ ಪಿರೇರಾ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಮೊದಲಿಗೆ ರೆಮೋನಾ ಎವೆಟ್ ಪಿರೇರಾರಿಗೆ ಚರ್ಚ್ ಮುಂಬಾಗದಿಂದ ಸಭಾಂಗಣಕ್ಕೆ ಮೆರವಣಿಗೆಯ ಮೂಲಕ ಕರೆತರಲಾಗುವುದು. ಕ್ಲಪ್ತ ಸಮಯಕ್ಕೆ ಅಭಿನಂದನಾ ಸಮಾರಂಭ ಆರಂಭವಾಗಲಿದ್ದು, ಕಾರ್ಯಕ್ರಮದಲ್ಲಿ ವಿವಿಧ ರೆಮೋನಾ ಎವೆಟ್ ಪಿರೇರಾರಿಗೆ ಸಂಘಸಂಸ್ಥೆಗಳಿಗೆ ಸನ್ಮಾನ ಮಾಡಲು ಅವಕಾಶ ನೀಡಲಾಗುವುದು ಎಂದು ಅಭಿನಂದನಾ ಕಾರ್ಯಕ್ರಮದ ಸಂಚಾಲಕರಾದ ಸ್ಟೀವನ್ ಕುಲಾಸೊ ನಿರಂತರ್ ಉದ್ಯಾವರ ಅಧ್ಯಕ್ಷರಾದ ರೋಶನ್ ಕ್ರಾಸ್ಟೋ, ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಅಧ್ಯಕ್ಷರಾದ ಲ. ಜೆರಾಲ್ಡ್ ಪಿರೇರಾ, ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ