ಆಂಧ್ರಕ್ಕೆ ಕರ್ನಾಟಕ ರಾಜ್ಯದ ಅಬ್ದುಲ್‌ ನಜೀರ್ ಸೇರಿ ವಿವಿಧ ರಾಜ್ಯಗಳ ರಾಜ್ಯಪಾಲರ ನೇಮಕ

Spread the love

ಆಂಧ್ರಕ್ಕೆ ಕರ್ನಾಟಕ ರಾಜ್ಯದ ಅಬ್ದುಲ್‌ ನಜೀರ್ ಸೇರಿ ವಿವಿಧ ರಾಜ್ಯಗಳ ರಾಜ್ಯಪಾಲರ ನೇಮಕ
 

ಬೆಂಗಳೂರು: ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ, ಕರ್ನಾಟಕದ ಎಸ್. ಅಬ್ದುಲ್ ನಜೀರ್ ಸೇರಿದಂತೆ ಹೊಸ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನೇಮಕ ಮಾಡಿದ್ದಾರೆ.

ಎಸ್. ಅಬ್ದುಲ್ ನಜೀರ್ ಅವರನ್ನು ಆಂಧ್ರಪ್ರದೇಶ ರಾಜ್ಯದ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ.

ಬಿಜೆಪಿ ನಾಯಕರಾದ ಲಕ್ಷ್ಮಣ್ ಪ್ರಸಾದ್ ಆಚಾರ್ಯ, ಸಿ.ಪಿ.ರಾಧಾಕೃಷ್ಣನ್, ಶಿವ ಪ್ರತಾಪ್ ಶುಕ್ಲಾ ಮತ್ತು ರಾಜಸ್ಥಾನದ ವಿರೋಧ ಪಕ್ಷದ ನಾಯಕ ಗುಲಾಬ್ ಚಂದ್ ಕಟಾರಿಯಾ ಅವರನ್ನು ಕ್ರಮವಾಗಿ ಸಿಕ್ಕಿಂ, ಜಾರ್ಖಂಡ್, ಹಿಮಾಚಲ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.

ಮಹಾರಾಷ್ಟ್ರಕ್ಕೆ ರಮೇಶ್ ಬೈಸ್, ಲಡಾಖ್‌ಗೆ ಲೆಫ್ಟಿನೆಂಟ್ ಗವರ್ನರ್‌ ಆಗಿ ಬಿ.ಡಿ ಮಿಶ್ರಾ ಅವರನ್ನು ನೇಮಿಸಲಾಗಿದೆ. ಈ ಹಿಂದೆ ರಮೇಶ್‌ ಬೈಸ್‌ ಅವರು ಜಾರ್ಖಂಡ್‌, ಬಿ.ಡಿ.ಮಿಶ್ರಾ ಅವರು ಅರುಣಾಚಲ ಪ್ರದೇಶದ ರಾಜ್ಯಪಾಲರಾಗಿದ್ದರು.

ಅರುಣಾಚಲ ಪ್ರದೇಶಕ್ಕೆ ಕೆ.ಟಿ.ಪರ್ನಾಯಕ್‌ ಅವರನ್ನು ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.


Spread the love