
ಆಗುಂಬೆ: ಅಪಘಾತ ತಪ್ಪಿಸಲು ಪೊಲೀಸರಿಂದ ಕಾರ್ಯತಂತ್ರ
ಕಾರ್ಕಳ: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಆಗುಂಬೆ ಘಾಟಿ ಹಾಗೂ ಇತರ ಪ್ರದೇಶದಲ್ಲಿ ಇತ್ತೀಚೆಗೆ ನಿರಂತರವಾಗಿ ನಡೆದ ಅಫಘಾತಗಳಿಂದ ಜೀವಹಾನಿಯಾಗಿದ್ದು ಈ ನಿಟ್ಟಿನಲ್ಲಿ ವಾಹನ ಸವಾರರಿಗೆ ರಸ್ತೆ ಸುರಕ್ಷತೆ ಬಗ್ಗೆ ಯಾವ ರೀತಿಯಲ್ಲಿ ಜಾಗೃತಿ ಮೂಡಿಸಬಹುದು ಮತ್ತು ಮುಂಜಾಗ್ರತಾ ಕ್ರಮಗಳ ಕುರಿತು ಕಾರ್ಕಳ ಡಿವೈಎಸ್ಪಿ, ಸಿಪಿಐ, ಹೆಬ್ರಿ ಪಿಎಸ್ ಐ, ಆರ್ ಟಿ ಒ ಹಾಗೂ ಹೆದ್ದಾರಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಗುರುವಾರ ಮಧ್ಯಾಹ್ನ ಈ ಕುರಿತು ಕಾರ್ಕಳ ಡಿವೈಎಸ್ಪಿ, ಸಿಪಿಐ, ಹೆಬ್ರಿ ಪಿಎಸ್ ಐ, ಆರ್ ಟಿ ಒ ಹಾಗೂ ಹೆದ್ದಾರಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಸಾರ್ವಜನಿಕರ ಅಭಿಪ್ರಾಯಗಳನ್ನು ಕೂಡ ಪಡೆದುಕೊಂಡು ರಸ್ತೆಯಲ್ಲಿ ಹೆಚ್ಚಿನ ರಿಫ್ಲೆಕ್ಟರ್ ಅಳವಡಿಕೆ, ರಸ್ತೆ ತಿರುವುಗಳಲ್ಲಿ ಎಚ್ಚರಿಕೆ ಫಲಕ, ಕ್ಯಾಟ್ ಐಯ್ ಅಳವಡಿಕೆ. ತಿರುವುಗಳಲ್ಲಿ ಭಾಗಿರುವ ಮರದ ಗೆಲ್ಲುಗಳನ್ನು ಕಡಿದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು. ಈಗಾಗಲೇ ಪೊಲೀಸ್ ಇಲಾಖೆಯಿಂದ ಅಫಘಾತ ವಲಯ ಎಚ್ಚರಿಕೆ ಸೈನ್ ಬೋರ್ಡ್ ಗಳನ್ನು ಹಾಕಲಾಗಿದ್ದು ಇನ್ನೂ ಹೆಚ್ಚು ಸೈನ್ ಬೋರ್ಡ್ ಗಳನ್ನು ಹಾಕಲು ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ ಕಿರಿದಾದ ರಸ್ತೆ ಇರುವಲ್ಲಿ, ತಿರುವು ರಸ್ತೆ, ಅಫಘಾತ ವಲಯ ಸೈನ್ ಬೋರ್ಡ್ ಗಳನ್ನು ಕೂಡ ಹಾಕಲು ನಿರ್ಧಾರ ಕೈಗೊಳ್ಳಾಗಿದೆ ಇದಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ವ್ಯವಸ್ಥೆ ಮಾಡುವುದಾಗಿ ಒಪ್ಪಿಕೊಂಡಿರುತ್ತಾರೆ.
ಅಲ್ಲದೆ ವಾಹನಗಳ ವೇಗವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ತಿರುವುಗಳಲ್ಲಿ ಹೆಚ್ಚು ಕಡೆ ರಿಬ್ಲಿಂಗ್ಸ್ ಗಳನ್ನು ಹಾಕುವುದು. ಪ್ರವಾಸಿಗರಿಗೆ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಶನಿವಾರ ಮತ್ತು ಭಾನುವಾರ ಸೋಮೇಶ್ವರ ಪೇಟೆ ಮತ್ತು ಘಾಟಿ ಆರಂಭವಾಗುವ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.
ಈ ವೇಳೆ ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ, ಸಿಪಿಐ ಟಿಡಿ ನಾಗರಾಜ್, ಹೆಬ್ರಿ ಪಿಎಸ್ಐ ಸುದರ್ಶನ ದೊಡ್ಡಮನಿ, ಆರ್ ಟಿ ಒ ಅಧಿಕಾರಿ ಸಂತೋಷ್ ಶೆಟ್ಟಿ, ಶೃಂಗೇರಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಾದ ನವೀನ್ ಮತ್ತು ಶಶಿಧರ್ ಉಪಸ್ಥಿತರಿದ್ದರು.