ಆಟೋ ಮರಕ್ಕೆ ಡಿಕ್ಕಿ: ಚಾಲಕ ಸ್ಥಳದಲ್ಲಿಯೇ ಸಾವು

Spread the love

ಆಟೋ ಮರಕ್ಕೆ ಡಿಕ್ಕಿ: ಚಾಲಕ ಸ್ಥಳದಲ್ಲಿಯೇ ಸಾವು

ಭಾರತೀನಗರ: ಪ್ಯಾಸೆಂಜರ್ ಆಟೋ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸಮೀಪದ ಅಂಬರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅಂಬರಹಳ್ಳಿ ಗ್ರಾಮದ ಪುಟ್ಟಸ್ವಾಮಿ ಎಂಬುವರ ಪುತ್ರ ನವೀನ್ (30) ಎಂಬಾತನೇ ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಈತ ನವೀನ್ ಎಂದಿನಂತೆ ತನ್ನ ಪ್ಯಾಸೆಂಜರ್ ಆಟೋದಲ್ಲಿ ಭಾರತೀನಗರದಿಂದ ಮದ್ದೂರಿಗೆ ಜನರನ್ನು ಕರೆದೊಯ್ಯುವ ಕೆಲಸ ಮಾಡುತ್ತಿದ್ದನು. ಎಂದಿನಂತೆ ಶನಿವಾರವೂ ಸಹ ತನ್ನ ಕರ್ತವ್ಯವನ್ನು ನಿರ್ವಹಿಸಿದ ನವೀನ್ ರಾತ್ರಿ 10:30ರ ಸಂದರ್ಭದಲ್ಲಿ ಮುಟ್ಟನಹಳ್ಳಿ ಗ್ರಾಮದ ಮೂಲಕ ಅಂಬರಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭ ಅಂಬರಹಳ್ಳಿ ಬಳಿ ಆಟೋ( ಕೆಎ 09, ಬಿ 7610) ಆಯತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ.

ಈ ಸಂದರ್ಭ ತೀವ್ರವಾಗಿ ಗಾಯಗೊಂಡ ನವೀನ್ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮಳೆ ಬೀಳುತ್ತಿದ್ದರಿಂದ ರಾತ್ರಿ 10.30 ಗಂಟೆಯಲ್ಲಿ ನಡೆದ ಘಟನೆಯನ್ನು ಗ್ರಾಮಸ್ಥರು ಯಾರು ನೋಡದ ಕಾರಣ ಮಧ್ಯರಾತ್ರಿ 3ರ ವೇಳೆಗೆ ಇದನ್ನು ಗಮನಿಸಿದ ಗ್ರಾಮಸ್ಥರು ಸಾವಿಗೀಡಾಗಿದ್ದ ನವೀನ್ ಮೃತದೇಹವನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಶವವನ್ನು ಶವ ಪರೀಕ್ಷೆಗೊಳಪಡಿಸಿ ನಂತರ ಶವವನ್ನು ಕುಟುಂಬದವರಿಗೆ ನೀಡಲಾಯಿತು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೆ.ಎಂ.ದೊಡ್ಡಿ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.


Spread the love