ಆಟೋ ರಿಕ್ಷಾದಲ್ಲಿ ಗಾಂಜಾ ಮಾರಾಟ ಯತ್ನ, ಮೂವರ ಬಂಧನ, ರೂ. 2.66 ಲಕ್ಷ ಮೌಲ್ಯದ ಗಾಂಜಾ ವಶ

Spread the love

ಆಟೋ ರಿಕ್ಷಾದಲ್ಲಿ ಗಾಂಜಾ ಮಾರಾಟ ಯತ್ನ, ಮೂವರ ಬಂಧನ, ರೂ. 2.66 ಲಕ್ಷ ಮೌಲ್ಯದ ಗಾಂಜಾ ವಶ

ಮಣಿಪಾಲ: ಮಾದಕ ವಸ್ತುಗಳನ್ನು ಮಾರಾಟ ಮಾಡುವವರ ವಿರುದ್ದತಮ್ಮ ಕಾರ್ಯಾಚರಣೆಯನ್ನು ಮುಂದುವರಿಸಿರುವ ಉಡುಪಿ ಜಿಲ್ಲಾ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಮಹರಾಷ್ಟ್ರದಿಂದ ಮಣಿಪಾಲದಲ್ಲಿ ಮಾರಾಟ ಮಾಡಲು ತಂದಿದ್ದ 2,66,000/ ರೂ ಮೌಲ್ಯದ ಸುಮಾರು 8 ಕೆ.ಜಿ ಗಾಂಜಾ , ಕೃತ್ಯಕ್ಕೆ ಬಳಸಿದ ಆಟೋರಿಕ್ಷಾವನ್ನು ವಶಪಡಿಸಿಕೊಂಡು ಮೂವರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮಹಾರಾಷ್ಟ್ರ ಮೂಲದ ಗೌತಮ್ ರಾಜು ಶಿಮುಂಗೆ, ಪಂಜಾಬ್ ಮೂಲದ ಜೆಸ್ವಿಂದರ್ ಸಿಂಗ್ ಹಾಗೂ ಬ್ರಹ್ಮಾವರ ಕೊಳಲಗಿರಿಯ ಕೃಷ್ಣ ಜಲಗಾರ್ ಎಂದು ಗುರುತಿಸಲಾಗಿದೆ.

ಗುರುವಾರ ಖಚಿತ ಮಾಹಿತಿಯ ಶೀಂಬ್ರಾ ಸೇತುವೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಆಟೋರಿಕ್ಷಾ ನಂಬರ್ KA20C 3042 ನೇದರಲ್ಲಿ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ದಾಳಿ ಮಾಡಿ ಮಹಾರಾಷ್ಟ್ರ ಮೂಲದ ಗೌತಮ್ ರಾಜು ಶಿಮುಂಗೆ, ಮತ್ತು ಪಂಜಾಬ್ ಮೂಲದ ಜೆಸ್ವಿಂದರ್ ಸಿಂಗ್ ಹಾಗೂ ಬ್ರಹ್ಮಾವರ ಕೊಳಲ ಗಿರಿಯ ಕೃಷ್ಣ ಜಲಗಾರ್ ನ್ನು ಬಂಧಿಸಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ ಐಪಿಎಸ್ ರವರ ಮಾರ್ಗದರ್ಶನದಲ್ಲಿ ,ಅಡಿಷನಲ್ ಎಸ್.ಪಿ ಕುಮಾರ ಚಂದ್ರ ಹಾಗೂ ಸುಧಾಕರ ನಾಯಕ್ ಡಿ.ವೈ.ಎಸ್.ಪಿ ಉಡುಪಿ , ರವರ ನೇತೃತ್ವದಲ್ಲಿ , ಮಂಜುನಾಥ್.ಎಂ ಗೌಡ ಪಿ.ಐ ಮಣಿಪಾಲ , ಸಂತೋಷ್ ಕಾಯ್ಕಣಿ ಸಿ.ಪಿ.ಐ ಬೈಂದೂರು ಹಾಗೂ ಮಣಿಪಾಲ ಪೊಲೀಸ್ ಠಾಣೆಯ ಸಿಬ್ಬಂಧಿಗಳಾದ ಪ್ರೊಬೇಶನರಿ ಪಿ.ಎಸ್.ಐ ದೇವರಾಜ್ ಸಿದ್ದಣ್ಣ ಬಿರಾದಾರ್ ಮತ್ತು ಅಮೀನ್ಸಾಬ್ ಮೌಲಾಸಾಬ್ ಅತ್ತಾರ್, ಎ.ಎಸ್.ಐ ಶೈಲೇಶ್, ಹೆಚ್.ಸಿಗಳಾದ ದಯಾಕರ್ ಪ್ರಸಾದ್, ವಿಶ್ವಜಿತ್ , ನವೀನ್, ಅಬ್ದುಲ್ ರಜಾಕ್ ಪಿ.ಸಿ ಸಂತೋಷ್ ಹೆಚ್.ಟಿ, ರೇವಣಸಿದ್ದಪ್ಪ, ಲೊಕೇಶ್ ಮತ್ತು ಆದರ್ಶ , ಬೈಂದೂರು ವೃತ್ತದ ಸಿಬ್ಬಂಧಿಗಳಾದ ಚಂದ್ರ, ಅಶೋಕ, ನವೀನ್ ಮತ್ತು ಗುರು ಪ್ರಸಾದ್ ರವರು ಈ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

ಪೊಲೀಸರು ಮುಂದಿನ ದಿನಗಳಲ್ಲಿಯೂ ಕೂಡಾ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ತಿಳಿಸಿರುತ್ತಾರೆ. ಕಾರ್ಯಾಚರಣೆ ನಡೆಸಿರುವ ತಂಡವನ್ನು ಮಂಗಳೂರು ಐ.ಜಿ.ಪಿ ದೇವಜ್ಯೋತಿ ರೈ ರವರು ಶ್ಲಾಘಿಸಿರುತ್ತಾರೆ.


Spread the love