ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಪೂರಕ ಬಜೆಟ್ : ಯಶ್ ಪಾಲ್ ಸುವರ್ಣ

Spread the love

ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಪೂರಕ ಬಜೆಟ್ : ಯಶ್ ಪಾಲ್ ಸುವರ್ಣ

ಉಡುಪಿ: ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲ ಸೀತರಾಮನ್ ರವರು ಮಂಡಿಸಿದ 2022-23 ನೇ ಸಾಲಿನ ಕೇಂದ್ರ ಬಜೆಟ್ ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಪೂರಕವಾಗಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್‌ ಸುವರ್ಣ ಅಭಿಪ್ರಾಯಪಟ್ಟಿದ್ದಾರೆ.

ರಕ್ಷಣಾ ಇಲಾಖೆಯಲ್ಲಿ 68% ಸ್ಥಳೀಯ ಸಾಮಾಗ್ರಿ ಖರೀದಿ, ಸಹಕಾರ ಸಂಘಗಳ ಸರ್ ಚಾರ್ಜ್ 12% ನಿಂದ 7% ಇಳಿಕೆ, ರಾಜ್ಯ ಸರಕಾರಗಳಿಗೆ 50 ವರ್ಷಗಳ ಕಾಲ 1 ಲಕ್ಷ ಕೋಟಿ ಅನುದಾನ, ಡಿಜಿಟಲೀಕರಣಕ್ಕೆ ವಿಶೇಷ ಪ್ರಾಮುಖ್ಯತೆ ಹಾಗೂ ನೇರ ತೆರಿಗೆ, ಆದಾಯ ತೆರಿಗೆಯನ್ನು ಏರಿಕೆ ಮಾಡದೇ, ಪಂಚ ರಾಜ್ಯ ಚುನಾವಣೆ ಸಂದರ್ಭದಲ್ಲೂ ಘೋಷಣೆಗೆ ಸೀಮಿತವಾದ ಜನಪ್ರಿಯ ಬಜೆಟ್ ಮಂಡಿಸದೇ ಆರ್ಥಿಕ ಸಬಲೀಕರಣದ ದೂರದೃಷ್ಟಿಯ ಸರ್ವ ಸ್ಪರ್ಶಿ ಜನಸಾಮಾನ್ಯರ ಬಜೆಟ್ ಮಂಡಿಸಿದ ಕೇಂದ್ರ ಸರಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.


Spread the love