
ಆಯುರ್ವೇದ ವೈದ್ಯಕೀಯ ಕಾಲೇಜು – ಆಯುರ್ಗ್ರಾಮ್ ಆಯುರ್ಭಾರತ
ಕುರ್ನಾಡು – ಆಪ್ತಸ್ ಆಯುರ್ವೇದ ನಡೆಸಿದ “ಆಯುರ್ಗ್ರಾಮ” ಎಂಬ ಸ್ಪರ್ಧೆಯಲ್ಲಿ ನರಿಂಗಾನ, ಯೆನೆಪೋಯ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ 2ನೇ ವರ್ಷದ ಬಿ.ಎ.ಎಂ.ಎಸ್ ವಿದ್ಯಾರ್ಥಿಗಳು ಕುರ್ನಾಡು ಗ್ರಾಮ ಪಂಚಾಯತ್ ಸಹಯೋಗದಲ್ಲಿ ಕುರ್ನಾಡು ಗ್ರಾಮದಲ್ಲಿ,ಮುಡಿಪುವಿನಲ್ಲಿ ಆಯುರ್ವೇದ ಜಾಗೃತಿ ಶಿಬಿರವನ್ನು ನಡೆಸಿದರು.
ಆಯುರ್ಗ್ರಾಮ್” ಎಂಬುದು ಚರಕ ಜಯಂತಿಯ ಪರವಾಗಿ ಆಚಾರ್ಯ ಚರಕ ಮತ್ತು ಆಯುರ್ವೇದವನ್ನು ಆಚರಿಸಲು ಮತ್ತು ಜಾಗೃತಿ ಮೂಡಿಸಲು ನಡೆಸುವ ಸ್ಪರ್ಧೆಯಾಗಿದೆ. ಭಾರತದಾದ್ಯಂತ ಇರುವ ಆಯುರ್ವೇದ ಕಾಲೇಜುಗಳು 7 ದಿನಗಳ ಕಾಲ ಗ್ರಾಮವನ್ನು ದತ್ತು ತೆಗೆದುಕೊಂಡು ಅದನ್ನು “ಆಯುರ್ಗ್ರಾಮ್” ಆಗಿ ಪರಿವರ್ತಿಸುವ ಮೂಲಕ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. “ರೀಚ್ ಆಯುರ್ವೇದ ಟು ಈಚ್”/ “ಪ್ರತಿಯೊಬ್ಬರಿಗೂ ಆಯುರ್ವೇದವನ್ನು ತಲುಪಿ” ಈ ಸ್ಪರ್ಧೆಯ ಮುಖ್ಯ ಗುರಿಯಾಗಿದೆ.
10 ಸದಸ್ಯರ ತಂಡವು 7 ದಿನಗಳ ಕಾಲ ಅಂದರೆ 15/07/22 ರಿಂದ 21/07/22 ರವರೆಗೆ ಶಿಬಿರವನ್ನು ನಡೆಸಿತು. ಪ್ರಾಥಮಿಕ ಆರೋಗ್ಯ ಕೇಂದ್ರ (ಕುರ್ನಾಡು) ಮತ್ತು ಕೆ.ಎಫ್.ಸ ಹಾಲ್ (ಕುರ್ನಾಡು ಫ್ರೆಂಡ್ಸ್ ಸರ್ಕಲ್) ಉಚಿತ ಆರೋಗ್ಯ ಶಿಬಿರಗಳನ್ನು ನಡೆಸಿತು. ಒಟ್ಟು 160 ರೋಗಿಗಳು ಇದರ ಪ್ರಯೋಜನ ಪಡೆದರು.ಇದರ ಹೊರತಾಗಿ, ಪ್ರತಿದಿನ ಯೋಗಾಭ್ಯಾಸವನ್ನು ನಡೆಸಲಾಯಿತು ಮತ್ತು ಗ್ರಾಮಸ್ಥರಿಗೆ ಪಥ್ಯ ಆಹಾರ (ಆರೋಗ್ಯಕರ ಆಹಾರ ಪದಾರ್ಥಗಳು) ವಿತರಿಸಲಾಯಿತು. ಅವರು ಇ.ಎನ್.ಟಿ ಮತ್ತು ಕಣ್ಣುಗಳು, ಸ್ತ್ರೀ ರೋಗ, ಚರ್ಮದ ಅಸ್ವಸ್ಥತೆಗಳು ಮತ್ತು ಸಾಮಾನ್ಯ ಆರೋಗ್ಯದಲ್ಲಿ ಪರಿಣತಿ ಹೊಂದಿರುವ ವೈದ್ಯರಿಂದ ಆರೋಗ್ಯ ತಪಸ್ಸನೆ ಮತ್ತು ಉಚಿತ್ತ ಔಷಧ ವಿತರಿಸಲಾಯಿತು. ವಿಶೇಷಾ ತಜ್ಞರ ಮಾತುಕತೆಗಳನ್ನು ಏರ್ಪಡಿಸಿದರು.
ಕುರ್ನಾಡು , ಗವರ್ನಮೆಂಟ್ ಫರ್ಸ್ಟ್ ಗ್ರೇಡ್ ಕಾಲೇಜಿನಲ್ಲಿ (ಜಿಎಫ್‌ಜಿಸಿ) ಮಾನಸಿಕ ಆರೋಗ್ಯ ಮತ್ತು ಒತ್ತಡ ನಿರ್ವಹಣೆ ಕುರಿತು ಪರಿಣಿತರಿಂದ ಸೆಷನ್ ನೀಡಲಾಯಿತು.ಶ್ರೀ ಭಾರತಿ ಹೈಯರ್ ಪ್ರೈಮರಿ ಶಾಲೆ ಮತ್ತು ದತ್ತಾತ್ರೇಯ ಎ.ಎಚ್.ಪಿ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಶಾಲಾ ಚಟುವಟಿಕೆಗಳು ಮತ್ತು ಆಯುರ್ವೇದ ಪ್ರದರ್ಶನಗಳು ಸಹ ನಡೆದವು. ಆಯುರ್ವೇದದ ಮೂಲ ತತ್ವಗಳ ಕುರಿತು ಬೀದಿ ನಾಟಕ, ಆಯುರ್ವೇದ ಮೂಲದ ಕುರಿತು ಕಿರುನಾಟಕ, ಜಾನಪದ ನೃತ್ಯ, ದೇಶಭಕ್ತಿ ಗೀತೆ ಮತ್ತು ಫ್ಲ್ಯಾಷ್‌ಮಾಬ್ ಅನ್ನು ಸಹ ಆಯೋಜಿಸಲಾಗಿತ್ತು. ಶಾಲಾ ಮಕ್ಕಳು ಮತ್ತು ಗ್ರಾಮದ ಜನರು ಸೇರಿದಂತೆ ಒಟ್ಟು 550 ಜನರು ಶಿಬಿರದ ಪ್ರಯೋಜನ ಪಡೆದರು.