
ಆಯುಷ್ಮಾನ್ ಆಂದೋಲನದಲ್ಲಿ 40 ಸಾವಿರ ನೋಂದಣಿ ಗುರಿ
ಮಂಡ್ಯ: ಆಯುಷ್ಮಾನ್ ಭಾರತ್ ಪ್ರಧನಮಂತ್ರಿ ಜನಾರೋಗ್ಯ ಹೆಲ್ತ್ ಕಾರ್ಡ್ ಗೆ ಎರಡು ದಿನಗಳಲ್ಲಿ 40ಸಾವಿರ ಜನರನ್ನು ನೊಂದಣಿ ಮಾಡಿಸುವ ಗುರಿ ಹೊಂದಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗಾರಾಜು ತಿಳಿಸಿದರು.
ಪಾಂಡವಪುರ ತಾಲ್ಲೂಕಿನ ಹಾರೋಹಳ್ಳಿ ಗ್ರಾಮದಲ್ಲಿ ವಿಶೇಷವಾದ ಆಂದೋಲನ ರೂಪದಲ್ಲಿ ನೊಂದಣಿ ಕಾರ್ಯ ಪ್ರಾರಂಭ ಮಾಡಿ ಮಾತನಾಡಿ, ಮಂಡ್ಯ ಜಿಲ್ಲೆಯ 18 ಲಕ್ಷ ಜನರಿಗೆ ಈ ಒಂದು ಉಚಿತ ಆರೋಗ್ಯ ಕಾರ್ಡ್ ವಿತರಿಸಬೇಕು ಎಂಬ ಉದ್ದೇಶದಿಂದ ಗ್ರಾಮ ಒನ್ ಪ್ರಾಂಚೈಸಿಗಳ ಮೂಲಕ, ಪ್ರತಿ ಗ್ರಾಮದ ನ್ಯಾಯಬೆಲೆ ಅಂಗಡಿ, ವಸತಿನಿಲಯ, ಶಾಲಾ- ಕಾಲೇಜು ಹಾಗೂ ಹೆಚ್ಚು ಜನ ಸೇರುವ ಪ್ರದೇಶಗಳಿಗೆ ಭೇಟಿ ನೀಡಿ ಉಚಿತವಾಗಿ ಆಯುಷ್ಮಾನ್ ಭಾರತ್ ಪ್ರಾಧನಮಂತ್ರಿ ಜನಾರೋಗ್ಯ ಹೆಲ್ತ್ ಕಾರ್ಡ್ ನೊಂದಣಿಯ ಕಾರ್ಯವನ್ನು ಪ್ರಾರಂಭಿಸಿದ್ದೇವೆ ಎಂದರು.
300ಕ್ಕೂ ಹೆಚ್ಚು ಗ್ರಾಮ ಒನ್ ಪ್ರಾಂಚೈಸಿಗಳ ಮೂಲಕ ಜನ ಸಾಮಾನ್ಯರ ಮನೆಬಾಗಿಲಿಗೆ ಹೋಗಿ ಕಾರ್ಡ್ ಮಾಡಿಸುತ್ತೇವೆ. ನೊಂದಣಿ ಮಾಡಿಸುವಾಗ ಆಧಾರ್ ಕಾರ್ಡ್ ಮತ್ತು ಮೊಬೈಲ್ ಓಟಿಪಿ ನೀಡಬೇಕಾಗುತ್ತದೆ ಎಂದರು. ಜನ ಸಾಮಾನ್ಯರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಪಾಂಡವಪುರ ತಹಶೀಲ್ದಾರ್ ಸೌಮ್ಯ,ಮಕ್ಕಳ ಸಾಹಿತ್ಯ ಪರಿಷತ್ ನ ಅದ್ಯಕ್ಷ ಧನ್ಯಕುಮಾರ್ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು ಇದ್ದರು.