ಆರು ತಿಂಗಳ ಒಳಗೆ 94 ಸಿ ಕೊಡಿಸುವ ವ್ಯವಸ್ಥೆ – ಪ್ರಸಾದ್ ರಾಜ್ ಕಾಂಚನ್

Spread the love

ಆರು ತಿಂಗಳ ಒಳಗೆ 94 ಸಿ ಕೊಡಿಸುವ ವ್ಯವಸ್ಥೆ – ಪ್ರಸಾದ್ ರಾಜ್ ಕಾಂಚನ್

ಉಡುಪಿ: 94C ಸಿಗದಿದ್ದವರಿಗೆ 6 ತಿಂಗಳ ಒಳಗೆ ಕೊಡಿಸುವ ವ್ಯವಸ್ಥೆ ಮಾಡುವುದಾಗಿ ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಹೇಳಿದರು.

ಅವರು ಕೆಮ್ಮಣ್ಣು, ಕಳ್ತೂರಿನ ಗೇರುಬೀಜ ಕಾರ್ಖಾನೆಗಳಿಗೆ ಭೇಟಿ ನೀಡಿ ಸಿಬ್ಬಂದಿಗಳನ್ನುದ್ದೇಶಿಸಿ ಮಾತನಾಡಿದರು.

ಬಡವರ ಸರ್ವತೋಮುಖ ಏಳಿಗೆ ತನ್ನ ಪ್ರಮುಖ ಆದ್ಯತೆಯಾಗಿದ್ದು ಇಂದು ಹಕ್ಕುಪತ್ರದ ಸಮಸ್ಯೆಯಿಂದ ಹಲವಾರು ಕುಟುಂಬಗಳು ನಲುಗುತ್ತಿವೆ. ಸರಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯದೊಂದಿಗೆ ಉತ್ತಮ ವೈದ್ಯರ ಕೊರತೆ ಇದ್ದು ಅದನ್ನು ಸರಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಡಾ. ಸುನೀತಾ, ಸಹಕಾರಿ ಸಂಘದ ಧುರೀಣ ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ, ಸ್ಥಳೀಯ ಪಂಚಾಯತ್ ಸದಸ್ಯರು ಹಾಗೂ ಮಾಜಿ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here