ಆರೂರು ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಆತ್ಮಹತ್ಯೆ

Spread the love

ಆರೂರು ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಆತ್ಮಹತ್ಯೆ

ಉಡುಪಿ: ಆರೂರು ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ವರದಿಯಾಗಿದೆ.

ಮೃತರನ್ನು ಬ್ರಹ್ಮಾವರ ಸಮೀಪ ಹಾವಂಜೆಯ ದೊಂಪದಕುಮೇರಿ ನಿವಾಸಿ ಡಾ.ಎಂ.ರಾಘವೇಂದ್ರ ರಾವ್ (76) ಎಂದು ಗುರುತಿಸಲಾಗಿದೆ.

ಮೃತ ರಾಘವೇಂದ್ರ ರಾವ್‌ ಅವರು ಆರೂರು ವಿಷ್ಣುಮೂರ್ತಿ ದೇವಸ್ಥಾನದ ಆಡಳಿತದ ಮೊಕೇಸರಾಗಿದ್ದು, ಒಂದು ತಿಂಗಳ ಹಿಂದೆ ಪತ್ನಿ ಮೃತಪಟ್ಟ ಬಳಿಕ ಒಂಟಿಯಾಗಿದ್ದರು ಎನ್ನಲಾಗಿದೆ. ಒಂಟಿ ಜೀವನದೊಂದಿಗೆ ವಯೋ ಸಹಜ ರಕ್ತದೊತ್ತಡ ಮತ್ತು ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದ ಅವರು ಭಾನುವಾರ ಮನೆಯ ಕೋಣೆಯ ಜಂತಿಗೆ ಸೀರೆ ಬಿಗಿದು ಕುತ್ತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love